Breaking NewsLatestUncategorizedಜಿಲ್ಲಾ ಸುದ್ದಿರಾಮನಗರ
ಇದು ಅಧಿಕಾರಕ್ಕಾಗಿ ಕಿತ್ತಾಡುವ ಹೊತ್ತಲ್ಲ; ಬಿಜೆಪಿಗೆ ಎಚ್ಡಿಕೆ ಕುಟುಕು

ರಾಮನಗರ: ಕೊರೊನಾ ಸಂದರ್ಭದಲ್ಲಿ ಬಿಜೆಪಿ ಅಧಿಕಾರಕ್ಕೆ ಕಿತ್ತಾಟ ಮಾಡುವುದು ಸರಿಯಲ್ಲ, ಈ ಸಂದರ್ಭದಲ್ಲಿ ಯಾರೂ ಸಹ ರಾಜಕೀಯ ಮಾಡಬಾರದು ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾವಿ ಸಲಹೆ ನೀಡಿದ್ದಾರೆ.
ಚನ್ನಪಟ್ಟಣದ ಅಂಬೇಡ್ಕರ್ ಭವನದಲ್ಲಿ ಆರೋಗ್ಯ ಇಲಾಖೆ ವತಿಂದ ಹಮ್ಮಿಕೊಂಡಿದ್ದ ಕೊರೊನಾ ಲಸಿಕೆ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿ ಮುಖ್ಯಮಂತ್ರಿಯನ್ನ ಬದಲಾವಣೆ ಮಾಡೋದಾದರೆ ಮಾಡಿ, ಇಲ್ಲಾಂದ್ರೆ ಮುಂದುವರೆಸುವುದಾದ್ರೆ ಮುಂದುವರೆಸಿ, ಈ ವಿಚಾರವಾಗಿ ನಾನು ಆ ಪಕ್ಷದ ಹೈಕಮಾಂಡ್‌ಗೆ ಹೇಳ್ತೇನೆ ಸಿಎಂ ಬದಲಾವಣೆ ಬಗ್ಗೆ ಒಂದು ಸ್ಪಷ್ಟನೆ ನೀಡಿ, ಇನ್ನೆರಡು ವರ್ಷದಲ್ಲಿ ಚುನಾವಣೆ ಬರಲಿದೆ, ಹಾಗಾಗಿ ಈ ಸಂದರ್ಭದಲ್ಲಿ ರಾಜಕೀಯ ಬಿಟ್ಟು ಜನರ ಸೇವೆ ಮಾಡೋಣ ಅಂತಾ ಹೇಳಿದರು.
ರಾಜ್ಯದ ಇಂತಹ ಪರಿಸ್ಥಿತಿಯಲ್ಲಿ ಯಾವುದೇ ಪಕ್ಷಗಳು ರಾಜಕಾರಣ ಮಾಡಬಾರದು, ಒಂದು ವೇಳೆ ರಾಜಕಾರಣ ಮಾಡಿದ್ರೆ ರಾಜ್ಯದ ಜನರ ಜತೆಗೆ ಚೆಲ್ಲಾಟ ಆಡಿದಂತಾಗುತ್ತದೆ ಅಂತಾ ಎರಡು ಪಕ್ಷಗಳ ವಿರುದ್ಧ ಬೇಸರ ವ್ಯಕ್ತಪಡಿಸಿದರು.
