Uncategorized

10 ವರ್ಷದ ಬಳಿಕ ಕನ್ನಡ ಚಿತ್ರದ ಮೂಲಕ ಜೆನಿಲಿಯಾ ಕಮ್​ಬ್ಯಾಕ್: ನಾನು ಕರ್ನಾಟಕದವಳು ಎಂದ ನಟಿ

ಜನಾರ್ದನ ರೆಡ್ಡಿ ಪತ್ರ ಕಿರೀಟಿ ಕನ್ನಡ ಚಿತ್ರರಂಗದ ಮೂಲಕ ಸಿನಿ ಜರ್ನಿ ಆರಂಭಿಸಲು ಮುಂದಾಗಿದ್ದಾರೆ. ಇತ್ತೀಚಿಗೆ ಬೆಂಗಳೂರಿನ ಐಷಾರಾಮಿ ಹೋಟೆಲ್‌ನಲ್ಲಿ ಚಿತ್ರದ ಮೂಹೂರ್ತ ನಡೆದಿದ್ದು, ಮುಹೂರ್ತದಲ್ಲಿ ನಿರ್ದೇಶಕ ರಾಜಮೌಳಿ, ಕ್ರೇಜಿ ಸ್ಟಾರ್ ರವಿಚಂದ್ರನ್, ನಟಿ ಜೆನಿಲಿಯಾ ಸೇರಿ ಸಾಕಷ್ಟು ಮಂದಿ ಭಾಗಿಯಾಗಿದ್ದು ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

ಬರೋಬ್ಬರಿ 10 ವರ್ಷಗಳ ಬಳಿಕ ಜೆನಿಲಿಯಾ ನಟನೆಗೆ ಮರಳುತ್ತಿದ್ದು ನಟ ಕಿರೀಟಿಯ ಕುರಿತಾಗಿ ಮಾತನಾಡಿದ್ದಾರೆ. ಕಿರೀಟಿಯ ಮೊದಲ ಸಿನಿಮಾಗೆ ಒಳ್ಳೆಯದಾಗಲಿ, ನಿಮ್ಮ ಜರ್ನಿಯಲ್ಲಿ ನಾವು ಜೊತೆಯಾಗಿರುತ್ತೇವೆ. ಚಿತ್ರತಂಡಕ್ಕೆ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ತುಂಬಾ ಸಂತೋಷ ಇದೆ. ಕಿರೀಟಿಯ ಜೊತೆ ನಾನು ಕೂಡ ನ್ಯೂಕಮರ್ ಅನ್ನಿಸುತ್ತಿದೆ ಎಂದಿದ್ದಾರೆ.

ನಾನು ಮೂಲತಃ ಕರ್ನಾಟಕದವಳು. ನನ್ನ ತಾತ ಮುತ್ತಾತರು ವಾಸಿಸಿದ್ದ ಸ್ಥಳ ಇದು. 10 ವರ್ಷಗಳ ಬಳಿಕ ನಾನು ಕಮ್​ಬ್ಯಾಕ್ ಮಾಡುತ್ತಿದ್ದೇನೆ. ನಿಮ್ಮ ಪ್ರೀತಿ ಹಾಗೂ ಆಶೀರ್ವಾದ ನನಗೆ ಬೇಕಿದೆ. ಕಿರೀಟಿ ಜೊತೆ ನಟಿಸುವುದಕ್ಕೆ ಸಂತೋಷವಾಗುತ್ತಿದೆ ಎಂದಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button