Breaking Newsಕ್ರಿಕೆಟ್ಕ್ರೀಡೆವಿದೇಶ

ರಿಷಬ್ ಪಂತ್ ಗೆ ಕೋವಿಡ್ ಪಾಸಿಟಿವ್

ಲಂಡನ್: ಇಂಗ್ಲೆಂಡ್ ಪ್ರವಾಸದಲ್ಲಿರುವ ಭಾರತ ಟೆಸ್ಟ್ ತಂಡದ ವಿಕೆಟ್ ಕೀಪರ್ ರಿಷಬ್ ಪಂತ್ ಅವರಿಗೆ ಕೊರೊನಾ ಸೋಂಕು ತಗಲಿರುವುದನ್ನು ಭಾರತೀಯ ಕ್ರಿಕೆಟ್ ನಿಯಂತ್ರ ಮಂಡಳಿ ಖಚಿತಪಡಿಸಿದೆ. ಪಂತ್ ಈಗ ತಂಡದಿಂದ ಪ್ರತ್ಯೇಕವಾಗಿದ್ದಾರೆ.

ಟೆಸ್ಟ್ ವಿಶ್ವಚಾಂಪಿಯನ್ಷಿಪ್ ನ ಫೈನಲ್ ಪಂದ್ಯದ ನಂತರ ಭಾರತ ತಂಡ ಈಗ ವಿಶ್ರಾಂತಿಯಲ್ಲಿದೆ. ರಿಷಬ್ ಪಂತ್ ಕಳೆದ ವಾರ ವಿಂಬ್ಲೇ ಅಂಗಣದಲ್ಲಿ ನಡೆದ ಇಂಗ್ಲೆಂಡ್ ಮತ್ತು ಜರ್ಮನಿ ನಡುವಿನ ಯೂರೋ ಫುಟ್ಬಾಲ್ ಪಂದ್ಯವನ್ನು ವೀಕ್ಷಿಸಿದ್ದರು.‌

ಇನ್ನು ಕೆಲವು ಆಟಗಾರರು ಬೀದಿ ಸುತ್ತುತ್ತಿರುವ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಕಂಡುಬಂದಿದ್ದವು. ರಿಷಬ್ ಪಂದ್ಯ ವೀಕ್ಷಣೆ ವೇಳೆ ಮಾಸ್ಕ್ ಹಾಕದಿರುವ ಫೋಟೋ ವೈರಲ್ ಆಗಿತ್ತು.

Spread the love

Related Articles

Leave a Reply

Your email address will not be published. Required fields are marked *

Back to top button