ಇತರ ಕ್ರೀಡೆಕ್ರೀಡೆ

ರೋಜರ್ ಫೆಡರರ್: ಓಲ್ಡ್ ಈಸ್ ಗೋಲ್ಡ್

ಲಂಡನ್ : 39 ವರ್ಷ ಪ್ರಾಯದ ರೋಜರ್ ಫೆಡರರ್ ಆಧುನಿಕ ಟೆನಿಸ್ ನಲ್ಲಿ ವಿಂಬಲ್ಡನ್ ಚಾಂಪಿಯನ್ಷಿಪ್ ಕ್ವಾರ್ಟರ್ ಫೈನಲ್ ತಲುಪಿದ ಅತ್ಯಂತ ಹಿರಿಯ ಆಟಗಾರರೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇನ್ನೊಂದೆಡೆ ನೊವಾಕ್ ಜೊಕೋವಿಕ್ 50ನೇ ಗ್ರ್ಯಾನ್ ಸ್ಲಾಮ್ ಕ್ವಾರ್ಟರ್ ಫೈನಲ್ ತಲುಪಿದರು.

ಚಿಲಿಯ ಕ್ರಿಸ್ಟಿಯನ್ ಗ್ರೈನ್ ವಿರುದ್ಧ 6-2, 6-4, 6-2 ಅಂತರದಲ್ಲಿ ಜಯ ಗಳಿಸಿದ ಜೊಕೋವಿಕ್ 12ನೇ ಬಾರಿಗೆ ವಿಂಬಲ್ಡನ್ ಕ್ಬಾರ್ಟರ್ ಫೈನಲ್ ತಲುಪಿದರು. ಫೆಡರರ್ 18 ಮತ್ತು ಜಿಮ್ಮಿ ಕಾನರ್ಸ್ 14ನೇ ಬಾರಿ ಕ್ಬಾರ್ಟರ್ ಫೈನಲ್ ತಲುಪಿದ್ದರು. ಜೊಕೋವಿಕ್ 50ನೇ ಗ್ರ್ಯಾನ್ ಸ್ಲಾಮ್ ಕ್ಬಾರ್ಟರ್ ಫೈನಲ್ ತಲುಪಿದ 5ನೇ ಆಟಗಾರರೆನಿಸಿದರು. ರೋಜರ್ ಫೆಡರರ್ 58 ಬಾರಿ, ಕ್ರಿಸ್ ಎವರ್ಟ್ 54, ಸೆರೆನಾ ವಿಲಿಯಮ್ಸ್ 54 ಮತ್ತು ಮಾರ್ಟಿನಾ ನವ್ರಾಟಿಲೋವಾ 53 ಬಾರಿ ಗ್ರ್ಯಾನ್ ಸ್ಲಾಮ್ ಕ್ವಾರ್ಟ್ ಫೈನಲ್ ತಲುಪಿದ್ದರು.

8 ಬಾರಿ ವಿಂಬಲ್ಡನ್ ಪ್ರಶಸ್ತಿ ಗೆದ್ದಿರುವ ಫೆಡರರ್ 1968ರ ನಂತರ ಕ್ವಾರ್ಟರ್ ಫೈನಲ್ ತಲುಪಿದ ಅತ್ಯಂತ ಹಿರಿಯ ಆಟಗಾರೆನಿಸಿದರು. ಈ ದಾಖಲೆ ಇದುವರೆಗೂ ಕೆನ್ ರಾಸ್ವೆಲ್ ಅವರ ಹೆಸರಿನಲ್ಲಿದ್ದಿತ್ತು. ರಾಸ್ವೆಲ್ 1974ರಲ್ಲಿ ವಿಂಬಲ್ಡನ್ ಕ್ಬಾರ್ಟರ್ ಫೈನಲ್ ತಲುಪಿದ್ದಾಗ ಅವರಿಗೆ 39 ವರ್ಷ ವಯಸ್ಸಾಗಿತ್ತು. ಫೆರರರ್ ಅವರು ಲೊರೆನ್ಜೋ ಸೊನೆಗೊ ಅವರ ವಿರುದ್ಧ 7-5, 6-4, 6-2 ಅಂತರದಲ್ಲಿ ಜಯ ಗಳಿಸಿ ಇತಿಹಾಸ ಬರೆದರು. ಇದು ಫೆಡರರ್ ಅವರು ವಿಂಬಲ್ಡನ್ ನಲ್ಲಿ ಗೆದ್ದ 105ನೇ ಪಂದ್ಯವಾಗಿದೆ. ರಾಫೆಲ್ ನಡಾಲ್ ಕೂಡ ಫ್ರೆಂಚ್ ಓಪನ್ ನಲ್ಲಿ 105 ಪಂದ್ಯಗಳನ್ನು ಗೆದ್ದು ದಾಖಲೆ ಬರೆದಿದ್ದರು

Spread the love

Related Articles

Leave a Reply

Your email address will not be published. Required fields are marked *

Back to top button