Breaking Newsಇತರ ಕ್ರೀಡೆಕ್ರೀಡೆ
Tokyo Paralympics: ಕೃಷ್ಣಗೆ ಚಿನ್ನ: ಭಾರತಕ್ಕೆ 5ನೇ ಸ್ವರ್ಣ

ಟೋಕಿಯೋ: ಕೃಷ್ಣ ನಾಗರ್ SH6 ವಿಭಾಗದ ಬ್ಯಾಡ್ಮಿಂಟನ್ ಸಿಂಗಲ್ಸ್ ನಲ್ಲಿ ಚಿನ್ನದ ಪದಕ ಗೆಲ್ಲುವುದರೊಂದಿ ಟೋಕಿಯೋ ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತ 5ನೇ ಸ್ವರ್ಣ ಸಾಧನೆ ಮಾಡಿತು.
ಹಾಂಕಾಂಗ್ ನ ಮನ್ ಕಾಯ್ ಚು ವಿರುದ್ಧ ನಡೆದ ಪಂದ್ಯದಲ್ಲಿ ಕೃಷ್ಣ 21-17, 16-21, 21-16 ಅಂತರದಲ್ಲಿ ಜಯ ಗಳಿಸಿದರು.
ಭಾರತ ಇದರೊಂದಿಗೆ 5 ಚಿನ್ನ, 8 ಬೆಳ್ಳಿ ಹಾಗೂ 6 ಕಂಚಿನ ಪದಕಗಳ ಸಾಧನೆ ಮಾಡಿದೆ.
