Pro-Kabaddi: ಪ್ರೊ ಕಬಡ್ಡಿ ಲೀಗ್ ನ ಹರಾಜಿನಲ್ಲಿ ಕನ್ನಡಿಗರು

ಬೆಂಗಳೂರು : ಇದೇ ತಿಂಗಳ 29 ರಿಂದ 31 ರವರೆಗೆ ದೇಶದ ಜನಪ್ರಿಯ ಪ್ರೊ ಕಬಡ್ಡಿ ಲೀಗ್ ನ 8ನೇ ಆವೃತ್ತಿಗಾಗಿ ಹರಾಜು ಪ್ರಕ್ರಿಯೆ ನಡೆಯಲಿದ್ದು ಈ ಬಾರಿ ವಿದೇಶಿ ಮತ್ತು ದೇಶೀಯ ಆಟಗಾರರು ಸೇರಿ 500ಕ್ಕೂ ಹೆಚ್ಚು ಆಟಗಾರರನ್ನು 12 ಫ್ರಾಂಚೈಸಿಗಳು ಖರೀದಿಸಲಿವೆ.
ಹಿಂದಿನ ಅವೃತ್ತಿಯಲ್ಲಿ ಕೇವಲ 7 ತಂಡಗಳಿದ್ದು ಈ ಬಾರಿ 12 ತಂಡಗಳು ಪ್ರತಿಷ್ಠಿತ ಲೀಗ್ ನಲ್ಲಿ ಸ್ಪರ್ಧಿಸಲಿವೆ. ಕರ್ನಾಟಕದಲ್ಲಿ ಕಬಡ್ಡಿ ಆಟಕ್ಕೆ ಹೆಚ್ಚಿನ ಪ್ರೋತ್ಸಾಹವನ್ನು ನೀಡಲಾಗುತ್ತಿದ್ದು, ಈಗಾಗಲೇ ಅನೇಕ ಆಟಗಾರರು, ತರಬೇತುದಾರರು ಮತ್ತು ಕೋಚ್ ಗಳು ವಿವಿಧ ತಂಡಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. 2014ರಲ್ಲಿ ಕೇವಲ 96 ಆಟಗಾರರಿಂದ ಆರಂಭಗೊಂಡಿದ್ದ ಲೀಗ್ ಈಗ 500ಕ್ಕೂ ಹೆಚ್ಚು ಆಟಗಾರರಿಂದ ನೋಂದಾಯಿಸಲ್ಪಟ್ಟ ಲೀಗ್ ಆಗಿದೆ. ಈ ಬಾರಿ ಮತ್ತೆ ನಾಲ್ಕು ತಂಡಗಳು ಸೇರ್ಪಡೆಗೊಂಡಿದ್ದು ಇಂಡಿಯನ್ ಪ್ರೀಮಿಯರ್ ಲೀಗ್ ಗಿಂತಲೂ ಹೆಚ್ಚು ತಂಡಗಳನ್ನು ಹೊಂದಿರುವ ಲೀಗ್ ಎನಿಸಿದೆ.
ಹರಾಜಿನಲ್ಲಿ ಕನ್ನಡಿಗರು:
ಪ್ರಶಾಂತ್ ಕುಮಾರ್ ರೈ, ಸುಕೇಶ್ ಹೆಗ್ಡೆ, ಅವಿನಾಶ್ ಎ.ಆರ್, ಮನೋಜ್ ಗೌಡ ಕೆ, ವಿಠ್ಠಲ್ ಮೇಟಿ, ಮುನಿರಾಜು ಬಿ. ಎಸ್, ವಿವೇಕ್ ಕೆ, ಸಚಿನ್ ವಿ. ಸಂತೋಷ್ ಬಿಎಸ್, ನಿತೇಶ್ ಬಿ.ಆರ್, ದರ್ಶನ್ ಜೆ, ಪವನ್ ಟಿ.ಆರ್, ಮನೀಶ್ ಡಿಕೆ, ದಿವಿಶ್ ಬೊಲಿಯಾಜೆ, ಮಲ್ಲಿಕಾರ್ಜುನ್ ಜಕಣೂರ್, ಆನಂದ್ ವಿ. ಅರುಣ್ ಕುಮಾರ್ ಎಚ್.ಎನ್., ಹರೀಶ್ ನಾಯಕ್, ಮಿತಿನ್ ಕುಮಾರ್, ಪ್ರತಾಪ್ ಎಸ್, ರಾಕೇಶ್ ಗೌಡ, ರತನ್ ಕೆ, ಹಾಲಪ್ಪ ಹುಣಶ್ಯಾಳ್, ಭರತ್ ರಾಮ್, ರತನ್ ಜಿ, ಸತೀಶ, ವರುಣ್ ಶೆಟ್ಟಿ, ವಿಶ್ವಾಸ್ ಎಸ್, ಬಿ.ವೈ ಸೋಮೇಶ್ವರ್, ದಿಲೀಪ್ ಎಚ್ ಬಿ,, ಪ್ರವೀಣ್ ಜರೋನ್ ಸಿದ್ದಿ.




