ಇತರ ಕ್ರೀಡೆಕ್ರೀಡೆ
ಮೀರಾಬಾಯಿ ಚಾನುಗೆ ಹೆಚ್ಚುವರಿ ಪೊಲೀಸ್ ಅಧೀಕ್ಷಕರ ಹುದ್ದೆ

ಇಂಪಾಲ: ಟೋಕಿಯೋ ಒಲಿಂಪಿಕ್ಸ್ ವೇಟ್ ಲಿಫ್ಟಿಂಗ್ ನಲ್ಲಿ ಬೆಳ್ಳಿಪದಕ ಗೆದ್ದಿರುವ ಮೀರಾಬಾಯಿ ಚಾನು ಅವರಿಗೆ ಮಣಿಪುರ ಸರಕಾರ ಹೆಚ್ಚುವರಿ ಪೊಲೀಸ್ ಅಧೀಕ್ಷಕ (ಕ್ರೀಡೆ) ಹುದ್ದೆ ನೀಡಿ ಗೌರವಿಸಿದೆ.
ಬುಧವಾರ ಮಣಿಪುರ ಮುಖ್ಯಮಂತ್ರಿ ನೊಗ್ತಾಂಬನ್ ಬಿರೇನ್ ಸಿಂಗ್ ಅವರು ಹುದ್ದೆಯ ಆದೇಶವನ್ನು ಮೀರಾಬಾಯಿಗೆ ಹಸ್ತಾಂತರಿಸಿದರು.
ಪ್ರತಿಯೊಂದು ರಾಜ್ಯದಲ್ಲೂ ಜಾಗತಿಕ ಮಟ್ಟದ ಪದಕ ಗೆದ್ದ ಕ್ರೀಡಾಪಟುಗಳಿಗೆ ಉದ್ಯೋಗ ನೀಡುವ ಕ್ರಮ ಇದೆ. ಆದರೆ ಕರ್ನಾಟಕದಲ್ಲಿ ಇಂಥ ತೀರ್ಮಾನವನ್ನು ಕೈಗೊಂಡು ಉನ್ನತ ಹುದ್ದೆ ನೀಡುವ ಕ್ರಮವೇ ಇಲ್ಲ. ಅಲ್ಲದೆ ಗೆದ್ದರೆ ಉದ್ಯೋಗದಲ್ಲಿ ಬಡ್ತಿ ನೀಡಲೂ ಅವಕಾಶ ಇಲ್ಲದಿರುವುದು ದುರಂತ.
ಇದೇ ವೇಳೆ ಮಣಿಪುರ ಮುಖ್ಯಮಂತ್ರಿಗಳು ಮೀರಾಬಾಯಿಗೆ 1 ಕೋಟಿ ರೂ.ಗಳ ಬಹುಮಾನದ ಚೆಕ್ ನೀಡಿ ಸನ್ಮಾನಿಸಿದರು.




