Breaking NewsLatestಇತರ ಕ್ರೀಡೆಕ್ರೀಡೆ

ಪ್ಯಾರಾಲಿಂಪಿಕ್ಸ್: ಆಯ್ಕೆ ಟ್ರಯಲ್ಸ್​ನಲ್ಲಿಯೇ ಎರಡು ವಿಶ್ವದಾಖಲೆ

ಸೋಮಶೇಖರ ಪಡುಕೆರೆ

ಹೊಸದಿಲ್ಲಿ: ಇಲ್ಲಿನ ಜವಹರಲಾಲ್ ನೆಹರು ಕ್ರೀಡಾಂಗಣದಲ್ಲಿ ಟೋಕಿಯೋ ಪ್ಯಾರಾಲಿಂಪಿಕ್ಸ್ ಗಾಗಿ ನಡೆದ ಆಯ್ಕೆ ಟ್ರಯಲ್ಸ್ ನಲ್ಲಿ ಭಾರತದ ಪ್ಯಾರಾ ಅಥ್ಲೀಟ್ ಗಳಾದ ದೇವೇಂದ್ರ ಝಝಾರಿಯಾ ಮತ್ತು ಸಂದೀಪ್ ಚೌಧರಿ ವಿಶ್ವದಾಖಲೆ ಬರೆದಿದ್ದಾರೆ. ಸುಮಾರು 72 ಪ್ಯಾರಾ ಅಥ್ಲೀಟ್ ಗಳು ಈ ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.

ವಿಶ್ವ ಪ್ಯಾರಾಲಿಂಪಿಕ್ಸ್ ಸಮಿತಿಯ ಭಾರತಕ್ಕೆ 24 ಸ್ಥಾನಗಳನ್ನು ತುಂಬಲು ಅವಕಾಶ ಕಲ್ಪಿಸಿದೆ. ಉತ್ತಮ ಪ್ರದರ್ಶನ ತೋರಿ, ಕನಿಷ್ಠ ಅರ್ಹತಾ ಗುಣಮಟ್ಟವನ್ನು ತಲುಪಿದ ಅಥ್ಲೀಟ್ ಗಳು ಟೋಕಿಯೋಗೆ ಪ್ರಯಾಣ ಬೆಳೆಸಲಿದ್ದಾರೆ.

ಎರಡು ಬಾರಿ ಪ್ಯಾರಾಲಿಂಪಿಕ್ ನಲ್ಲಿ ಚಿನ್ನ ಗೆದ್ದಿರುವ ಝಝಾರಿಯಾ ಎಫ್ 46 ವಿಭಾಗದ ಜಾವೆಲಿನ್ ಎಸೆತದಲ್ಲಿ 65.71 ಮೀ. ಗುರಿ ತಲುಪಿದರೆ, ಎಫ್ 44 ವಿಭಾಗದಲ್ಲಿ ಚೌಧರಿ 66.44 ಮೀಟರ್ ಸಾಧನೆ ಮಾಡಿ ವಿಶ್ವದಾಖಲೆ ಬರೆದರು. 2016ರಲ್ಲಿ ನಡೆದ ರಿಯೋ ಪ್ಯಾರಾಲಿಂಪಿಕ್ಸ್ ನಲ್ಲಿ ಝಝಾರಿಯಾ 63.97 ಮೀ. ದೂರಕ್ಕೆ ಎಸೆದು ಚಿನ್ನದೊಂದಿಗೆ ವಿಶ್ವದಾಖಲೆ ಬರೆದಿದ್ದರು. ಇದುವರೆಗೂ ಪುರುಷರ ಎಫ್44 ವಿಭಾಗದ ವಿಶ್ವದಾಖಲೆ (66.14 ಮೀ) ಚೌಧರಿ ಅವರ ಹೆಸರಿನಲ್ಲಿದ್ದಿತ್ತು.

ಟೋಕಿಯೋಗಾಗಿ ಉತ್ತಮ ಪ್ರದರ್ಶನ ತೋರಿದವರಲ್ಲಿ ರಿಯೋ ಚಾಂಪಿಯನ್ ಹೈಜಂಪ ಪಟು ಮಾರಿಯಪ್ಪನ್ ತಂಗವೇಲು, ಜಾವೆಲಿನ್ ಎಸೆತಗಾರ ಸುಂದರ್ ಸಿಂಗ್ ಗುರ್ಜಾರ್, ಅಜೀತ್ ಸಿಂಗ್, ಶರದ್ ಕುಮಾರ್ ಮತ್ತು ವರುಣ್ ಭಾಟಿಯಾ ಸೇರಿದ್ದಾರೆ. ಆಯ್ಕೆ ಪ್ರಕ್ರಿಯೆಯ ವೇಳೆ ಭಾರತೀಯ ಪ್ಯಾರಾಲಿಂಪಿಕ್ಸ್ ಸಮಿತಿಯ ಅಧ್ಯಕ್ಷೆ ಡಾ. ದೀಪಾ ಮಲಿಕ್ ಹಾಜರಿದ್ದರು.

Spread the love

Related Articles

Leave a Reply

Your email address will not be published. Required fields are marked *

Back to top button