Breaking NewsLatestಇತರ ಕ್ರೀಡೆಕ್ರೀಡೆ

Tokyo Paralympics: ಮಾರಿಯಪ್ಪನ್ ಗೆ ಬೆಳ್ಳಿ, ಶರದ್ ಗೆ ಕಂಚು

ಟೋಕಿಯೋ : ಒಂದೇ ಸ್ಪರ್ಧೆಯಲ್ಲಿ ಭಾರತಕ್ಕೆ ಎರಡು ಪದಕ. ಹೈಜಂಪ್ T63 ವಿಭಾಗದಲ್ಲಿ ಮಾರಿಯಪ್ಪನ್ ತಂಗವೇಲು ಬೆಳ್ಳಿ ಹಾಗೂ ಶರದ್ ಕುಮಾರ್ ಕಂಚಿನ ಪದಕ ಗೆದ್ದು ದೇಶಕ್ಕೆ ಕೀರ್ತಿ ತಂದಿದ್ದಾರೆ.

ಮಾರಿಯಪ್ಪನ್ 1 .86 ಮೀ. ಎತ್ತರಕ್ಕೆ ಜಿಗಿದರೆ, ಶರದ್ 1.83 ಮೀ. ಎತ್ತರಕ್ಕೆ ಜಿಗಿದು ದ್ವಿತೀಯ ಹಾಗೂ ತೃತೀಯ ಸ್ಥಾನ ಗಳಿಸಿದರು. ರಿಯೋ ಒಲಿಂಪಿಕ್ಸ್ ನಲ್ಲಿ ಚಿನ್ನ ಗೆದ್ದಿದ್ದ ಮಾರಿಯಪ್ಪನ್ 1.88 ಮೀ. ಜಿಗಿಯುವಲ್ಲಿ ವಿಫಲರಾದರು. ಆದರೆ ಅಮೆರಿಕದ 1.88 ಮೀ ಜಿಗಿದು ಚಿನ್ನ ಗೆದ್ದರು.

ಮಾರಿಯಪ್ಪನ್ ಅವರಿಗೆ ಪ್ಯಾರಾಲಿಂಪಿಕ್ಸ್ ನಲ್ಲಿ ಇದು ಎರಡನೇ ಪದಕ. ರಿಯೋದಲ್ಲಿ ಅವರು ಚಿನ್ನ ಗೆದ್ದಿದ್ದರು. ಈ ಇಬ್ಬರೂ ಕ್ರೀಡಾಪಟುಗಳ ಯಶಸ್ಸಿನ ಹಿಂದೆ ಕನ್ನಡದ ಗುರು ಕೆ. ಸತ್ಯನಾರಾಯಣ ಅವರ ಶ್ರಮ ಇದೆ

Spread the love

Related Articles

Leave a Reply

Your email address will not be published. Required fields are marked *

Back to top button