ಇತರ ಕ್ರೀಡೆಕ್ರೀಡೆ

Kick Boxer Anish Shetty: ಅನೀಶ್ ಶೆಟ್ಟಿಗೆ ರಾಷ್ಟ್ರೀಯ ಬೆಳ್ಳಿ

ಪಣಜಿ: ಇಲ್ಲಿ ನಡೆದ ರಾಷ್ಟ್ರೀಯ ಥಾಯ್ ಬಾಕ್ಸಿಂಗ್ ಚಾಂಪಿಯನ್ಷಿಪ್‌ ನಲ್ಲಿ ಮೊದಲ ಬಾರಿಗೆ ಅಮೆಚೂರು ವಿಭಾಗದಲ್ಲಿ ಸ್ಪರ್ಧಿಸಿದ್ದ ಕರ್ನಾಟಕದ ವೃತ್ತಿಪರ ಕಿಕ್ ಬಾಕ್ಸರ್ ಅನೀಶ್ ಶೆಟ್ಟಿ ಬೆಳ್ಳಿಯ ಪದಕ ಗೆದ್ದಿದ್ದಾರೆ.

ಮುಂಬರುವ ವೃತ್ತಿಪರ ಸ್ಪರ್ಧೆಗಳಲ್ಲಿ ಹೆಚ್ಚಿನ ಯಶಸ್ಸನ್ನು ಕಾಣಲು ಗೋವಾದಲ್ಲಿ ತರಬೇತಿ ಪಡೆಯುತ್ತಿರುವ ಅನೀಶ್, ಅಲ್ಲಿಯ ಟ್ರೈಬಲ್ ವಾರಿಯರ್ಸ್ ಗೋವಾ (TWG) ತಂಡವನ್ನು ಪ್ರತಿನಿಧಿಸಿರುತ್ತಾರೆ. ನಾಲ್ಕು ಸುತ್ತಿನ ಹೋರಾಟದಲ್ಲಿ ಅನೀಶ್ ಒಡಿಶಾದ ಸ್ಪರ್ಧಿಯ ವಿರುದ್ಧದ ಅಂತಿಮ ಸುತ್ತಿನಲ್ಲಿ ಸೋಲು ಅನುಭವಿಸಿದರು.

“ಪ್ರೊಫೆಷನಲ್ ಸ್ಪರ್ಧೆಯಲ್ಲಿ ಪಾಲ್ಗೊಳ್ಳುತ್ತಿದ್ದ ನನಗೆ ಕಳೆ ಒಂದೂವರೆ ವರ್ಷಗಳಿಂದ ಯಾವುದೇ ಅವಕಾಶ ಸಿಗುತ್ತಿರಲಿಲ್ಲ. ಇದಕ್ಕೆ ಕೊರೋನಾ ಮುಖ್ಯ ಕಾರಣವಾಗಿತ್ತು. ಥಾಯ್ಲೆಂಡ್ ಗೂ ಹೋಗುವಂತಿರಲಿಲ್ಲ. ಹಾಗಾಗಿ ಫಿಟ್ನೆಸ್ ಕಾಯ್ದುಕೊಳ್ಳಲು ಮತ್ತು ಹೋರಾಟದ ಛಲ ಮುಂದುವರಿಸಲು ಇಂಥ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುತ್ತೇನೆ. ವೃತ್ತಿಪರ ಹೋರಾಟಗಳಲ್ಲಿ ಪಾಲ್ಗೊಳ್ಳುವಾಗ ಇರುವ ಮುಕ್ತತೆ ಇಲ್ಲಿರುವುದಿಲ್ಲ. ಗಾರ್ಡ್ ಹಾಕಿಕೊಂಡು ಸ್ಪರ್ಧೆ ನಡೆಸಬೇಕು. ಪ್ರೋ ವಿಭಾಗದಲ್ಲಿ ಯಾವುದೇ ಗಾರ್ಡ್ ಇರುವುದಿಲ್ಲ. ಮೊದಲ ಅಮೆಚೂರ್ ಸ್ಪರ್ಧೆಯಲ್ಲಿ ಬೆಳ್ಳಿಗೆದ್ದ ತೃಪ್ತಿ ಇದೆ ಎಂದರು.

Spread the love

Related Articles

Leave a Reply

Your email address will not be published. Required fields are marked *

Back to top button