
ಅಬುಧಾಬಿ : ಸತತ ಸೋಲಿನಿಂದ ಕಂಗೆಟ್ಟಿದ್ದ ಕೋಲ್ಕತಾ ನೈಟ್ ರೈಡರ್ಸ್ ಕೊನೆಗೂ ಜಯದ ಲಯಕ್ಕೆ ತಿರುಗಿ ಸತತ ಎರಡನೇ ಪಂದ್ಯದಲ್ಲಿ ಯಶಸ್ಸು ಕಂಡಿದೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಕೆಕೆಆರ್ 3 ವಿಕೆಟ್ ಜಯ ಗಳಿಸಿತು.
ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಕೆಕೆಆರ್ ಪಡೆ ಡೆಲ್ಲಿಯನ್ನು 127/9 ಕ್ಕೆ ಕಟ್ಟಿ ಹಾಕಿತು. ರಿಶಬ್ ಪಂತ್ ಮತ್ತು ಸ್ಟೀವನ್ ಸ್ಮಿತ್ ತಲಾ 39 ರನ್ ಗಳಿಸಿ ಡೆಲ್ಲಿಯ ಸಾಧಾರಣ ಮೊತ್ತದಲ್ಲಿ ಪ್ರಮುಖ ಪಾತ್ರವಹಿಸಿದರು. ಕೆಕೆಆರ್ ಪರ ಸುನಿಲ್ ನರೇನ್, ಅಯ್ಯರ್ ಹಾಗೂ ಫರ್ಗ್ಯೂಸನ್ ತಲಾ 2 ವಿಕೆಟ್ ಗಳಿಸಿದರು.
128 ರನ್ ಜಯದ ಗುರಿಹೊತ್ತ ಕೆಕೆಆರ್ ಪರ ಶುಭ್ಮನ್ ಗಿಲ್ (30), ನಿತೇಶ್ ರಾಣಾ (36*) ಹಾಗೂ ಸುನಿಲ್ ನರೇನ್ (21) ಅವರ ಆಕರ್ಷಕ ಬ್ಯಾಟಿಂಗ್ ನೆರವಿನಿಂದ ಯಶಸ್ಸು ಕಂಡಿತು. ಸುನಿಲ್ ನರೇನ್ ಪಂದ್ಯ ಶ್ರೇಷ್ಠ ಗೌರವಕ್ಕೆ ಪಾತ್ರರಾದರು




