ಇತರ ಕ್ರೀಡೆಕ್ರೀಡೆ
ಹಾಕಿ: ಕಳೆಯಿತು ಬರ, ಕೊರಳಿಗೆ ಕಂಚಿನ ಸರ

ಟೋಕಿಯೋ: ಬಲಿಷ್ಠ ಜರ್ಮನಿಯನ್ನು 5-4 ಗೋಲುಗಳ ಅಂತರದಲ್ಲಿ ಮಣಿಸಿದ ಭಾರತ 41 ವರ್ಷಗಳ ನಂತರ ಒಲಿಂಪಿಕ್ಸ್ ನಲ್ಲಿ ಪದಕ ಗೆದ್ದು ಹೊಸ ಇತಿಹಾಸ ಆರಂಭಿಸಿತು.
ಕಂಚಿನ ಪದಕಕ್ಕಾಗಿ ನಡೆದ ಪಂದ್ಯ ಕೊನೆಯ ಕ್ಷಣದವರೆಗೂ ರೋಚಕ ಕ್ಷಣಗಳಿಗೆ ಸಾಕ್ಷಿಯಾಯಿತು.ಗೋಲ್ ಕೀಪರ್ ಶ್ರೀಜೇಶ್ ಗೋಡೆಯಂತೆ ಜರ್ಮನಿಯ ಪೆನಾಲ್ಟಿ ಅವಕಾಶಗಳನ್ನು ತಡೆದು ಪಂದ್ಯದ ಹೀರೋ ಎನಿಸಿದರು.
ಭಾರತದ ಪರ ಸಿಮ್ರಾನ್ ಸಿಂಗ್ ಎರಡು ಗೋಲುಗಳನ್ನು ಗಳಿಸಿದರೆ ಹಾರ್ದಿಕ್ ಸಿಂಗ್, ಹರ್ಮನ್ ಪ್ರೀತ್ ಸಿಂಗ್ ಮತ್ತು ರೂಪಿಂದರ್ ಸಿಂಗ್ ತಲಾ ಒಂದು ಗೋಲು ಗಳಿಸಿ ಜಯದಲ್ಲಿ ಪ್ರಮುಖ ಪಾತ್ರವಹಿಸಿದರು.




