ಕಾಫಿನಾಡಿನಲ್ಲಿ ಕಾರುಗಳ ಅಬ್ಬರ: ಸಂದೀಪ್ ಮುಖರ್ಜಿ-ಪ್ರಕಾಶ್ ಮುತ್ತುಸ್ವಾಮಿ ತಂಡಕ್ಕೆ ಅಗ್ರಸ್ಥಾನ

ಚಿಕ್ಕಮಗಳೂರು: ಕಾಫಿನಾಡಿನಲ್ಲಿ ಎರಡು ದಿನಗಳ ಐ.ಎನ್.ಆರ್.ಆರ್.ಸಿ 4 ಚಕ್ರ ಮೋಟಾರ್ ರಾೄಲಿಗೆ ಭಾನುವಾರ ತೆರೆಬಿದ್ದಿದ್ದು ಸಂದೀಪ್ ಮುಖರ್ಜಿ- ಪ್ರಕಾಶ್, ಮುತ್ತುಸ್ವಾಮಿ ತಂಡ ಅಗ್ರಸ್ಥಾನವನ್ನು ಪಡೆಯಿತು.
ರಾಷ್ಟ್ರಮಟ್ಟದ ರಾೄಲಿಯಲ್ಲಿ ವಿವಿಧ ರಾಜ್ಯಗಳ 30ಕ್ಕೂ ಅಧಿಕ ಸ್ಪರ್ಧಿಗಳು ಪಾಲ್ಗೊಂಡಿದ್ದರು. ಚಿಕ್ಕಮಗಳೂರಿನ ಸಿರಿ ರೆಸಾರ್ಟ್ ಆವರಣದಿಂದ ರಾೄಲಿ ಆರಂಭಗೊಂಡು ಮೂಡಿಗೆರೆ, ಬೇಲೂರು, ಹಳೇಬೀಡು, ಮುತ್ತೋಡಿ ಸೇರುವಂತೆ ವಿವಿಧ ಭಾಗಗಳಲ್ಲಿ ಸಂಚರಿಸಿ, ಜನರ ಗಮನ ಸೆಳೆಯಿತು. ಮೋಡ ಕವಿದು ತಂಪಾದ ವಾತಾವರಣ, ಆಗಾಗ ಬಿಸಿಲು, ಮಳೆಯಿಂದ ಕೂಡಿದ ವಾತಾವರಣವನ್ನು ಸ್ಪರ್ಧಿಗಳು ಸವಿದರು.
ಸಂದೀಪ್ ಮುಖರ್ಜಿ- ಪ್ರಕಾಶ್ ಮುತ್ತುಸ್ವಾಮಿ ತಂಡಕ್ಕೆ ಅಗ್ರ ಸ್ಥಾನ, ನಂತರದ ಸ್ಥಾನಗಳಲ್ಲಿ ಕ್ರಮವಾಗಿ ಕೀರ್ತಿ ಪ್ರಸಾದ್-ಶಕ್ತಿವೇಲ್, ವಿನಯ್ ಕುಮಾರ್-ರವಿಕುಮಾರ್ ವಿಜೇತರಾದರು. ಪಾಲ್ಗೊಂಡಿದ್ದ ಎಲ್ಲಾ ಸ್ಪರ್ಧಿಗಳಿಗೆ ಟ್ರೋಫಿ ನೀಡಿ ಗೌರವಿಸಲಾಯಿತು.
ರಾೄಲಿಗೆ ಚಾಲನೆ ಕೊಡುವಾಗ ವಿಧಾನಪರಿಷತ್ ಉಪಸಭಾಪತಿ ಪ್ರಾಣೇಶ್ ಸಹಿತ ವಿವಿಧ ಗಣ್ಯರು ಪಾಲ್ಗೊಂಡಿದ್ದರು.




