
ಶಾರ್ಜಾ: ಸಾಧಾರಣ ಮೊತ್ತವನ್ನು ಕಲೆಹಾಕಿ ಶಿಸ್ತಿನ ಬೌಲಿಂಗ್ ಪ್ರದರ್ಶಿಸಿದ ವೆಸ್ಟ್ ಇಂಡೀಸ್ ತಂಡ ಬಾಂಗ್ಲಾದೇಶದ ವಿರುದ್ಧ 3 ರನ್ ಗಳ ರೋಚಕ ಜಯ ಗಳಿಸಿದೆ.
ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಬಾಂಗ್ಲಾ ತಂಡ ವಿಂಡೀಸ್ ಪಡೆಯನ್ನು 142 ರನ್ ಗೆ ಕಟ್ಟಿ ಹಾಕಿತು. ರೋಸ್ಟನ್ ಚೇಸ್ (39) ಮತ್ತು ನಿಕೊಲಾಸ್ ಪೂರನ್ (40) ವಿಂಡೀಸ್ ನ ಸಾಧಾರಣ ಮೊತ್ತದಲ್ಲಿ ಪ್ರಮುಖ ಕೊಡುಗೆ ನೀಡಿದರು.
143 ರನ್ ಗಳ ಮೊತ್ತವನ್ನು ಬೆಂಬತ್ತಿದ ಬಾಂಗ್ಲಾದೇಶ ಒತ್ತಡಕ್ಕೆ ಸಿಲುಕಿ ಕೇವಲ 139 ರನ್ ಗಳಿಸಲು ಶಕ್ತವಾಯಿತು. ವಿಂಡೀಸ್ ಐವರು ಬೌಲರ್ ಗಳನ್ನು ಅಂಗಣಕ್ಕಿಳಿಸಿತ್ತು. ವಿಶೇಷವೆಂದರೆ ಐವರೂ ಬೌಲರ್ ಗಳು ತಲಾ ಒಂದೊಂದು ವಿಕೆಟ್ ಗಳಿಸಿ ತಂಡದ ಜಯಕ್ಕೆ ನೆರವಾದರು.
ಕೇವಲ 22 ಎಸೆತಗಳಲ್ಲಿ 4 ಸಿಕ್ಸರ್ ಮತ್ತು ಒಂದು ಬೌಂಡರಿಸಿ 40 ರನ್ ಗಳಿಸಿದ ನಿಕೊಲಾಸ್ ಪೂರನ್ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.




