ಭಾರತದಲ್ಲಿ ಕಡಿಮೆ ಬೆಲೆಯ ಎಸ್ಯುವಿಗೆ ಹೆಚ್ಚಿದ ಬೇಡಿಕೆ

ಇತ್ತೀಚಿನ ದಿನಗಳಲ್ಲಿ ಕಾರಿನ ಕ್ರೇಜ್ ದಿನದಿಂದ ದಿನಕ್ಕೆ ಹೆಚ್ಚಾಗಿದೆ. ಹೀಗಾಗಿ ಮಾರುಕಟ್ಟೆಯಲ್ಲಿ ವಿವಿಧ ಕಂಪನಿಯ ಕಾರುಗಳಿಗೆ ಡಿಮ್ಯಾಂಡ್ ಹೆಚ್ಚಾಗಿದೆ. ಅದರಲ್ಲೂ ಯಾವ ಕಾರು ಚೀಪ್ ಅಂಡ್ ಬೆಸ್ಟ್ ಇರುತ್ತೋ ಅದನ್ನು ಜನರು ಕೈ ಎತ್ತಿಕೊಳ್ಳುತ್ತಾರೆ.
ಟಾಟಾ ದಾಖಲೆಯ ಎಸ್ಯುವಿಯ ಆಟೋಮೇಕರ್ ಟಾಟಾ ಮೋಟರ್ಸ್ ಎಸ್ಯುವಿ ಮಾರಾಟದಲ್ಲಿ ಭಾರೀ ಏರಿಕೆಯನ್ನು ಕಂಡಿದೆ.ಒಟ್ಟು ಪ್ಯಾಸೆಂಜರ್ ವೆಹಿಕಲ್ ಸೇಲ್ನಲ್ಲಿ ಭಾರೀ ಏರಿಕೆಯಾಗಿದ್ದು 40,777 ವಾಹನ ಮಾರಾಟವಾಗಿದ್ದು ಇದು ಒಂದು ತಿಂಗಳ ಅವಧಿಯಲ್ಲಿ ಮಾರಾಟವಾದ ಅತ್ಯಧಿಕ ವಾಹನಗಳ ಅಂಕಿಅಂಶ. ಕಳೆದ ವರ್ಷ ಜನವರಿಯಲ್ಲಿ ಇದೇ ಅವಧಿಗೆ ಬರೀ 26,978 ವಾಹನಗಳು ಮಾರಾಟವಾಗಿದ್ದವು.
ಟಾಟಾ ಮೋಟರ್ಸ್ ಕಾಂಪ್ಯಾಕ್ಟ್ ಎಸ್ಯುವಿ ನೆಕ್ಸಾನ್ ಬೆಲೆಯನ್ನು ಕನಿಷ್ಠ 11 ಸಾವಿರ ಹೆಚ್ಚಿಸಿದ್ದು ಇದು ವಿಭಿನ್ನ ಮಾಡೆಲ್ಗಳನ್ನು ಆಧರಿಸಿದೆ. ಈ ಬೆಲೆ ಬದಲಾವಣೆ ಕಳೆದ ವರ್ಷ ನವೆಂಬರ್ನಲ್ಲಿ ದಾಖಲಾಗಿದೆ. ಟಾಟಾ ನೆಕ್ಸಾನ್ 7.30 ಲಕ್ಷದಿಂದ 13.35 ಲಕ್ಷದ ತನಕ ಭಿನ್ನ ಬೆಲೆಯನ್ನು ಹೊಂದಿದೆ. ಟಾಟಾ ನೆಕ್ಸಾನ್ನಲ್ಲಿ 1.5 ಲೀಟರ್ ಟರ್ಬೋ ಡೀಸಲ್ ಎಂಜಿನ್ ಇದ್ದು 1.2 ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್ ಇದೆ. ಈ ಮೊದಲು ಕಾರಿನ ಎಂಜಿನ್ 110 ಎಚ್ಪಿ ಪವರ್ ಉತ್ಪಾದಿಸುತ್ತಿದ್ದಲ್ಲಿ ಎಂಜಿನ್ 120 ಎಚ್ಪಿ ಪವರ್ ಉತ್ಪಾದಿಸುತ್ತದೆ.



