Breaking NewsLatestರಾಜಕೀಯರಾಷ್ಟ್ರೀಯ

ʼಯೋಗಿ ಉಪಯೋಗಿʼ ಎಂದು ಪ್ರಧಾನಿ ಕೊಂಡಾಟ; ʼನಿರುಪಯೋಗಿʼ ಎಂದು ಅಖಿಲೇಶ್ ಯಾದವ್ ವ್ಯಂಗ್ಯ

ಲಕ್ನೋ: ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರನ್ನು ʼಉಪಯೋಗಿʼ (UP-Yogi)ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಕೊಂಡಾಡಿದ್ದಕ್ಕೆ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಟೀಕಿಸಿದ್ದು, ʼಯೋಗಿ ನಿರುಪಯೋಗಿʼ ಎಂದು ವ್ಯಂಗ್ಯವಾಡಿದ್ದಾರೆ.

ಪ್ರಧಾನಿ ಮೋದಿ ಶಹಜಹಾನ್ ಪುರದಲ್ಲಿ ಸಭೆಯೊಂದರಲ್ಲಿ ಮಾತನಾಡುತ್ತ, ಉತ್ತರ ಪ್ರದೇಶದಲ್ಲಿ ಮಾಫಿಯಾಗಳನ್ನು ತೊಡೆದು ಹಾಕಲಾಗಿದೆ. ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಅಲ್ಲದೆ ʼಯುಪಿ+ಯೋಗಿʼ ತುಂಬಾ ʼಉಪಯೋಗಿʼ ಆಗಿದ್ದಾರೆ ಎಂದು ಬಣ್ಣಿಸಿದ್ದರು.

ಇದಕ್ಕೆ ಅಖಿಲೇಶ್ ಯಾದವ್ ಕೌಂಟರ್ ಅಟಾಕ್ ಮಾಡಿದ್ದು, ಯೋಗಿ ಆಡಳಿತದಲ್ಲಿ ದಲಿತರು ಹಾಗೂ ಮಹಿಳೆಯರ ಮೇಲೆ ದಾಳಿಗಳು ನಡೆಯುತ್ತಿವೆ. ಹಸ್ರತ್ತಿನ ಹೆಣ್ಣುಮಗಳು, ಲಖೀಂಪುರದ ರೈತರು, ನಿರುದ್ಯೋಗಿಗಳು, ಹಿಂದುಳಿದ ವರ್ಗದ ಜನ ಈಗಿನ ಸರ್ಕಾರ ನಿರುಪಯುಕ್ತ ಎಂಬುದನ್ನು ಮನಗಂಡಿದ್ದಾರೆ ಎಂದರು.

Spread the love

Related Articles

Leave a Reply

Your email address will not be published. Required fields are marked *

Back to top button