Breaking Newsರಾಜಕೀಯರಾಷ್ಟ್ರೀಯ

ಅಧಿಕಾರದಲ್ಲಿ 7 ವರ್ಷ; ಮೋದಿ ವಿರುದ್ಧ ಕಾಂಗ್ರೆಸ್ ‘ಚಾರ್ಜ್​ಶೀಟ್’

ಅಧಿಕಾರದಲ್ಲಿ 7 ವರ್ಷಗಳ್ನು ಪೂರೈಸಿದ ಪ್ರಧಾನಿ ಮೋದಿ ಸರ್ಕಾರದ ವಿರುದ್ಧ ಏಳು ಅಂಶಗಳ ‘ಚಾರ್ಜ್‌ಶೀಟ್’ನ್ನು ಕಾಂಗ್ರೆಸ್ ಭಾನುವಾರ ಬಿಡುಗಡೆ ಮಾಡಿದೆ.

ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರವು ಸಾಧಿಸಿದ್ದ ಎಲ್ಲ ಆರ್ಥಿಕ ಲಾಭಗಳನ್ನು ಬಿಜೆಪಿ ಹಿಮ್ಮೆಟ್ಟಿಸಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ರೈತರ ಬಗ್ಗೆ ಸೂಕ್ಷ್ಮವಾಗಿ ವರ್ತಿಸದಿರುವುದು, ಕೋವಿಡ್ ಸಾಂಕ್ರಾಮಿಕ ಸಂದರ್ಭದ ನಿರ್ವಹಣೆಯಲ್ಲಿ ವೈಫಲ್ಯ, ಮತ್ತು ಚೀನಾದ ಬೆದರಿಕೆಗಳಿಂದ ದೇಶವನ್ನು ರಕ್ಷಿಸುವಲ್ಲಿ ವಿಫಲವಾಗಿರುವುದು ಇವೇ ಮೊದಲಾದ ಆರೋಪಗಳನ್ನು ಅದು ಕೇಂದ್ರ ಸರ್ಕಾರದ ವಿರುದ್ಧ ಮಾಡಿದೆ.

ವರ್ಚುವಲ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೇವಾಲಾ, ಮೋದಿ ಸರ್ಕಾರವು ಕಳೆದ 73 ವರ್ಷಗಳಲ್ಲೇ ದೇಶ ಕಂಡ ಅತಿ ದುರ್ಬಲ ಸರ್ಕಾರ ಎಂದು ಟೀಕಿಸಿದ್ದಾರೆ.

ಹೆಚ್ಚುತ್ತಿರುವ ನಿರುದ್ಯೋಗ, ಹಣದುಬ್ಬರ ಇವೇ ಈ ಸರ್ಕಾರ ಮಾಡಿರುವ ಸಾಧನೆಗಳು. ಬಡವರ ಪರವಾಗಿರದ ಸರ್ಕಾರ 7 ವರ್ಷಗಳನ್ನು ಪೂರೈಸಿರುವುದೇ ಈ ದೇಶಕ್ಕೆ ಅತ್ಯಂತ ಹಾನಿಕಾರಕ ಎಂದು ವ್ಯಂಗ್ಯವಾಡಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button