
“ನಾನು ಪ್ರಧಾನಿಯ ಭಾಷಣವನ್ನು ಕೇಳುವುದಿಲ್ಲ. ನನಗೆ ಮಾಡಲು ಮಹತ್ತರವಾದ ಕೆಲಸಗಳಿವೆ”
ಇದು ತಮಿಳ್ನಾಡಿನ ಹಣಕಾಸು ಸಚಿವ ಡಾ. ಪಳನಿವೇಲ್ ತ್ಯಾಗರಾಜನ್ ಮಾತು.
ದಿ ಪ್ರಿಂಟ್ ಹಿರಿಯ ಸಲಹಾ ಸಂಪಾದಕಿ ಜ್ಯೋತಿ ಮಲ್ಹೋತ್ರ, ಕೋವಿಡ್ ಸಮಸ್ಯೆಗಳ ಬಗ್ಗೆ ಮಾತನಾಡುತ್ತ ತಮಿಳುನಾಡು ಹಣಕಾಸು ಸಚಿವ ಡಾ. ಪಲನಿವೇಲ್ ತ್ಯಾಗರಾಜನ್ ಅವರನ್ನು ‘ನೀವು ತಮಿಳು ವ್ಯಕ್ತಿಯಾಗಿ ಪ್ರಧಾನಿ ಅವರ ಭಾಷಣವನ್ನು ಯಾವ ರೀತಿಯಾದ ಭಾವನೆಯಿಂದ ನೋಡುತ್ತೀರಿ ಅವರು ಹಿಂದಿಯಲ್ಲಿ ಮಾಡುವ ಭಾಷಣದ ಬಗೆಗಿನ ನಿಮ್ಮ ಅಭಿಪ್ರಾಯವೇನು?’ ಎಂದು ಕೇಳಿದಾಗ. ನಾನು ಪ್ರಧಾನಿಯ ಭಾಷಣವನ್ನು ಕೇಳುವುದಿಲ್ಲ ನನಗೆ ಮಾಡಲು ಮಹತ್ತರವಾದ ಕೆಲಸಗಳಿವೆ ಎಂದಿದ್ದಾರೆ ತ್ಯಾಗರಾಜನ್.
“ಆದರೆ ಬೇರೆಯವರು ಅವರ ಭಾಷಣ ನೋಡುತ್ತಾರಲ್ಲವೇ?” ಎಂಬ ಮಾತಿಗೆ ಉತ್ತರಿಸಿದ ಸಚಿವ, “ಹೌದು, ಆದರೆ ಈ ಬಗ್ಗೆ ನಾನು ಏನು ಯೋಚಿಸುವೆ ಎಂದು ನೀವು ಕೇಳಿದಿರಿ. ನನ್ನ ಹಿಂದಿ ಅಷ್ಟೇನೂ ಚೆನ್ನಾಗಿಲ್ಲ. ಆದರೆ ವಾಸ್ತವವನ್ನು ಅರ್ಥಮಾಡಿಕೊಳ್ಳುವ ವಿವೇಚನೆ ನನಗಿದೆ. ನಾನು ಪ್ರಧಾನಿಯ ಬಗ್ಗೆ ಏನೂ ಯೋಚಿಸುವುದಿಲ್ಲ. ಅವರ ವಿಚಾರಗಳಲ್ಲಿ ಮೌಲ್ಯಯುತವಾದುದು ಯಾವುದೂ ಇಲ್ಲ” ಎಂದು ತಮಿಳುನಾಡು ಹಣಕಾಸು ಸಚಿವ ಡಾ. ಪಲನಿವೇಲ್ ತ್ಯಾಗರಾಜನ್ ಉತ್ತರಿಸಿದ್ದಾರೆ.
ಇದು ಈಗ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ.




