Latestಜಿಲ್ಲಾ ಸುದ್ದಿರಾಜಕೀಯಹುಬ್ಬಳ್ಳಿ - ಧಾರವಾಡ

ಪೊಲೀಸರ ವಿರುದ್ಧ ಗೃಹ ಸಚಿವರು ಆಡಿದ ಮಾತುಗಳನ್ನು ಹಿಂಪಡೆಯಬೇಕು: ಕೋನರೆಡ್ಡಿ ಒತ್ತಾಯ

ಧಾರವಾಡ: ನಮ್ಮ ರಾಜ್ಯದ ಪೊಲೀಸರು ‌ಇತರೆ ರಾಜ್ಯದ ಪೊಲೀಸರಿಗೆ ಮಾದರಿಯಾಗಿದ್ದಾರೆ.‌ ಅಂತಹದರಲ್ಲಿ ಗೃಹ‌ಸಚಿವರೇ ಪೊಲೀಸರ ವಿರುದ್ಧ‌ ಹಗುರವಾಗಿ ಮತಮಾಡಿರುವುದು ಖಂಡನೀಯವಾಗಿದೆ. ರಾಜ್ಯದ ಪೊಲೀಸರಲ್ಲಿ ಸಣ್ಣಪುಟ್ಟ ತಪ್ಪಿಗಳು ನಡೆಯುತ್ತಿರಬಹುದು. ಆದರೆ‌ ಅದನ್ನೇ ಇಟ್ಟುಕೊಂಡು ಪೊಲೀಸರು ಲಂಚಕೋರರಾಗಿದ್ದಾರೆ ಹಾಗೂ ದರೋಡೆಕೋರಾಗಿದ್ದಾರೆ ಅನ್ನುವುದು ಸರಿಯಲ್ಲ. ಕೂಡಲೇ ಗೃಹ ಸಚಿವರು ಪೊಲೀಸ್ ವಿರುದ್ಧ ಹಗುರವಾಗಿ ಆಡಿದ ಮಾತುಗಳನ್ನು ಹಿಂಪಡೆಯಬೇಕು‌ ಎಂದು ನವಲಗುಂದ ಮಾಜಿ ಶಾಸಕ‌ ಎನ್ ಹೆಚ್ ಕೋನರೆಡ್ಡಿ ಆಗ್ರಹಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೃಹ ಸಚಿವರಾದ ಅರಗ ಜ್ಞಾನೇಂದ್ರರವರು ಪೊಲೀಸ್ ಇಲಾಖೆಯ ಗೌರವವನ್ನು ಹೆಚ್ಚಿಸುತ್ತಾರೆ ಎಂದು ತಿಳಿದುಕೊಂಡಿದ್ವಿ. ಆದರೆ ತಮ್ಮದೇ ಗೃಹ‌ ಇಲಾಖೆಯ ಸಿಬ್ಬಂದಿಗಳ ವಿರುದ್ಧ ಇಷ್ಟು ಹಗುರವಾಗಿ‌ ಮಾತನಾಡುವುದು ಸರಿಯಲ್ಲ. ಇವರೇ ಹೀಗೆ ಮಾತನಾಡಿದ್ದರೆ‌, ಮುಂದೊಂದಿನ‌ ಪುಂಡಪೋಕರಿಗಳು ಸಮಾಜದಲ್ಲಿ‌ ಅಶಾಂತಿ ಉಂಟು ಮಾಡುತ್ತಾರೆ. ಇಲಾಖೆಯ ಗೌರವ ಹೆಚ್ಚಿಸಬೇಕಾದ ಸಚಿವರೇ ಈ ರೀತಿ‌ ಹೇಳಿಕೆ ನೀಡಿದ್ದು ಸರಿಯಲ್ಲ ಎಂದರು.

ಮಹಾದಾಯಿ‌ ಮತ್ತು ಕಳಸಾ-ಬಂಡೂರಿಗಾಗಿ ಹೋರಾಟ ಮಾಡಿದ ಹಲವರಿಗೆ ಕಳೆದ ದಿನ ಸಮನ್ಸ್ ಜಾರಿಯಾಗಿದೆ. ನವಲಗುಂದ ವ್ಯಾಪ್ತಿಯ ಮಹದಾಯಿ ಹೋರಾಟಗಾರರಾದ ಸುಮಾರು 18 ಜನರಿಗೆ ನ್ಯಾಯಾಲಯಕ್ಕೆ ಹಾಜರಾಗಲು‌ ಸೂಚನೆ ನೀಡಲಾಗಿದೆ. ಆದರೆ ಈ ಹಿಂದನೇ ಮಾಜಿ ಸಿಎಂಗಳಾದ ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ಅವರ ಸರ್ಕಾರ ಇದ್ದಾಗ ಮಹದಾಯಿ ಹೋರಾಟಗಾಋ ಮೇಲಿನ ಪ್ರಕರಣಗಳನ್ನು ಕೈ ಬೀಡಲಾಗಿದೆ. ಅದರ ಕುರಿತು ಘೋಷಣೆಯು ಕೂಡಾ ಅಂದೇ ಮಾಡಲಾಗಿದ್ದು, ನ್ಯಾಯಾಲಯವು ಕೂಡ ಇದನ್ನು‌ಅಂದು ಒಪ್ಪಿಕೊಂಡಿತು. ಆದರೆ ಈಗ ಮತ್ತೆ ಹೋರಾಟಗಾರರಿಗೆ ಸಮನ್ಸ್ ಬಂದಿರುವುದು ಆಶ್ಚರ್ಯ ಮೂಡಿಸಿದೆ ಎಂದು ತಿಳಿಸಿದರು.

ಸರ್ಕಾರ ಯಾವುದೇ ಇರಲಿ, ಆದರೆ ರೈತ ಮಹದಾಯಿ‌ ಹೋರಾಟಗಾರರ ಮೇಲಿನ ಪ್ರಕರಣಗಳನ್ನು ಮತ್ತೆ ರೀ ಓಪನ್ ಮಾಡುವ ಕೆಲಸ ಮಾಡಬಾರದು. ಈಗಾಗಲೇ ಇದರ ಕುರಿತು ಕ್ಯಾಬಿನೆಟನಲ್ಲಿ ಚರ್ಚೆ ಮಾಡಿ ಕೇಸ್‌ಗಳನ್ನು ವಿಡ್ರಾ ಮಾಡಲಾಗಿದ್ದು, ಆದರೂ ಇಂದು ಸಮನ್ಸ್ ಬಂದಿರುವುದು ಗೊಂದಲ ಸೃಷ್ಟಿಯಾಗಿದೆ.‌ ಹಾಗಾಗಿ ಇದರ ಕುರಿತು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಗಮನ ಹರಿಸಬೇಕು. ಅವರು ಕೂಡಾ ಮಹದಾಯಿ ಕುರಿತು ಸಾಕಷ್ಟು ಹೋರಾಟ ಮಾಡಿದ್ದವರಾಗಿದ್ದಾರೆ. ಈ ಕೂಡಲೇ ಸಿಎಂರವರು ಗಮನ ಹರಿಸಿ, ಏನಾದರೂ ಟೆಕ್ನಿಕಲ್ ತೊಂದರೆ ಇದ್ದರೆ ಅದನ್ನು ಪರಿಹರಿಸಬೇಕು ಎಂದು ಒತ್ತಾಯ ಮಾಡಿದರು.

ಮಹದಾಯಿ ಹೋರಾಟಗಾರಿಗೆ ಈಗ ಸಮನ್ಸ್ ಜಾರಿಯಾಗುವ ಕುರಿತಂತೆ ಪೊಲೀಸ್ ಅಧಿಕಾರಿಗಳು ಯಾರಾದರೂ ತಪ್ಪು ಮಾಡಿದ್ದಲ್ಲಿ ಅವರ ವಿರುದ್ಧವೂ ಮುಖ್ಯಮಂತ್ರಿಗಳು ಕ್ರಮ ಕೈಗೊಳ್ಳಬೇಕು. ಕೆಲವೊಮ್ಮೆ ಪೋಲೀಸರು ಪ್ರಕರಣಗಳನ್ನು ರೀ ಓಪನ್ ಮಾಡಲು ಅವಕಾಶ ಇರುತ್ತದೆ.‌ ಹಾಗಾಗಿ ಇಂದು ಸಮನ್ಸ್ ಜಾರಿ‌ ಆಗಿರುವುದರ ಹಿಂದೆ ಪೊಲೀಸರ‌ ತಪ್ಪು ಇದ್ರೆ ಕ್ರಮವಾಗಬೇಕು ಎಂದು ಒತ್ತಾಯ ಮಾಡಿದರು. ‌

Related Articles

Leave a Reply

Your email address will not be published. Required fields are marked *

Back to top button