Breaking NewsLatestಜಿಲ್ಲಾ ಸುದ್ದಿತುಮಕೂರುಮೆಟ್ರೋರಾಜಕೀಯರಾಜ್ಯಸುದ್ದಿ

ಹೋಗು ದೂರ ನಿಲ್ಲು…ಹಿರಿಯ ಪೊಲೀಸ್ ಅಧಿಕಾರಿಗೆ ಗದರಿದ ಸಿಎಂ!

ತುಮಕೂರು: ಸೀನಿಯರ್ ಆಫಿಸರ್ ಆಗಿದ್ದೀಯಾ, ಗೊತ್ತಾಗಲ್ವಾ ನಿನಗೆ, ಹೋಗು ದೂರ ನಿಲ್ಲು… ಈ ಮಾತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರದು. ತುಮಕೂರಿನಲ್ಲಿ ತ್ರಿವಿಧ ದಾಸೋಹಿ ಶ್ರೀ ಶಿವಕುಮಾರ ಸ್ವಾಮೀಜಿ ಅವರ ಮೂರನೇ ವರ್ಷದ ಸ್ಮರಣೆ ಅಂಗವಾಗಿ ಆಯೋಜಿಸಿದ್ದ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಸಿಎಂ ನಗರಕ್ಕೆ ಆಗಮಿಸಿದ್ದರು. ಸಿಎಂ ಕಾರು ಇಳಿಯುತ್ತಿದ್ದಂತೆ ಜನ ಅವರನ್ನು ಸುತ್ತುವರಿದರು. ಇರುಸುಮುರುಸಿಗೆ ಈಡಾದ ಸಿಎಂ, ಸ್ಥಳದಲ್ಲೇ ಇದ್ದ ಕೇಂದ್ರ ವಲಯ ಐಜಿಪಿ ಚಂದ್ರಶೇಖರ್ ವಿರುದ್ಧ ಗದರಿದ್ದು ಹೀಗೆ.

ಇದೇ ವೇಳೆ ಡಿವೈಎಸ್ ಪಿ ಶ್ರೀನಿವಾಸ ಅವರ ವಿರುದ್ಧವೂ ಸಿಎಂ ಗರಂ ಆದರು. ಜನರು ಗುಂಪು ಸೇರದಂತೆ ಎಚ್ಚರವಹಿಸಿ ಎಂದು ಜೋರು ದನಿಯಲ್ಲೇ ಸೂಚಿಸಿದರು. ಇದಾದ ನಂತರ ಸಿಎಂ ಬೊಮ್ಮಾಯಿ, ಸಿದ್ದಗಂಗಾ ಮಠದಲ್ಲಿ ದಾಸೋಹ ದಿನಾಚರಣೆಗೆ ಚಾಲನೆ ನೀಡಿದರು. ಮಠದ ಮಕ್ಕಳಿಗೆ ದಾಸೋಹ ಬಡಿಸಿದರು. ಇದಕ್ಕೂ ಮುನ್ನ ಶಿವಕುಮಾರ ಶ್ರೀಗಳ ಗದ್ದುಗೆ ದರ್ಶನ ಪಡೆದರು. ಕೋವಿಡ್ ಹಿನ್ನೆಲೆಯಲ್ಲಿ ಎಲ್ಲಾ ಕಾರ್ಯಕ್ರಮಗಳು ಸರಳವಾಗಿ ನಡೆದವು.

Related Articles

Leave a Reply

Your email address will not be published. Required fields are marked *

Back to top button