ಉಚಿತ ಅಂತ್ಯ ಸಂಸ್ಕಾರ ನೀಡುವ ಪ್ರಣಾಳಿಕೆ ಸಮರ್ಥಿಸಿಕೊಂಡ ಶಾಸಕ ಪಿ ರಾಜೀವ್

ಬೆಳಗಾವಿ: ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ಈ ಪ್ರಣಾಳಿಕೆಯ ಒಂದು ಅಂಶವಾಗಿರುವ ಉಚಿತ ಶವ ಸಂಸ್ಕಾರದ ಕೊಡುಗೆ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಮಹಾನಗರದಲ್ಲಿ ಶವ ಸಂಸ್ಕಾರದ ಸಲುವಾಗಿಯೇ ಪಾಲಿಕೆಯ ಶ್ರದ್ಧಾಂಜಲಿ ವಾಹನಗಳು ಇವೆ ಅಲ್ಲದೆ ಬಿಪಿಎಲ್ ಕಾರ್ಡ್ ದಾರರಿಗೆ 5 ಸಾವಿರ ಸಹಾಯ ಧನ ಕೂಡ ನೀಡಲಾಗುತ್ತಿದೆ ಆದ್ರೂ ಬಿಜೆಪಿ ಈ ಅಂಶವನ್ನು ಯಾಕೆ ಸೇರಿಸಿದೆ ಎನ್ನುವ ಪ್ರಶ್ನೆಗೆ ಶಾಸಕ ಪಿ ರಾಜೀವ್ ಉತ್ತರ ನೀಡಲಿಲ್ಲ.
ಇನ್ನು ಸಣ್ಣ ಸಣ್ಣ ವಿಷಗಳನ್ನೇ ಬಿಜೆಪಿ ಪ್ರಮುಖವಾಗಿ ಇಟ್ಟುಕೊಂಡು ಚುನಾವಣೆಗೆ ಸ್ಪರ್ದಿಸಿದ್ದು ಕೇಂದ್ರ ಸರ್ಕಾರದ ಯೋಜನೆಗಳನ್ನ ಇಟ್ಟುಕೊಂಡು ಹಿಂದುತ್ವ ಹಾಗೂ ರಾಷ್ಟ್ರೀಯತೆ ಅಂಶ ಇಟ್ಟುಕೊಂಡು ಚುನಾವಣೆಗೆ ಬಂದಿರುವುದಾಗಿ ಪಿ ರಾಜೀವ್ ತಿಳಿಸಿದ್ದಾರೆ.
ಇನ್ನು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಮಾತನಾಡಿ ಬೆಳಗಾವಿ ನಗರದ ಅಭಿವೃದ್ಧಿಗೆ ಈಗಾಗಲೇ ಕೇಂದ್ರ ಸರ್ಕಾರ ಸಾಕಷ್ಟು ಹಣ ಬಿಡುಗಡೆ ಮಾಡಿರುವ ಬಗ್ಗೆ ಹೇಳಿದರು ಅಲ್ಲದೆ ಕೇಂದ್ರ ಸರ್ಕಾರದ ಯೋಜನೆಗಳನ್ನ ವಿವರಿಸಿದರು.
ಇನ್ನು ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ನಡೆದಿರುವ ಅವ್ಯವಹಾರ ಹಾಗೂ ಕಳಪೆ ಕಾಮಗಾರಿ ಬಗ್ಗೆ ಪ್ರಶ್ನಿಸಿದಾಗ ಉತ್ತರ ನೀಡದೆ ಇಬ್ಬರು ಬಿಜೆಪಿ ನಾಯಕರು ಜಾರಿಕೊಂಡಿದ್ದಾರೆ.
ಛತ್ರಪತಿ ಶಿವಾಜಿ ಮಹಾರಾಜರ ಹಿಂದೂ ರಾಷ್ಟ್ರ ಸಂಕೇತವನ್ನ ಬಿಜೆಪಿ ಪಕ್ಷ ಹೊಂದಿದ್ದು ಹೀಗಾಗಿ ಹಿಂದುತ್ವದ ಗುರುತಾಗಿ ಮತ ನೀಡುವಂತೆ ಹೇಳಿಕೆಯನ್ನ ರಾಜೀವ್ ನೀಡಿದ್ದಾರೆ, ಮರಾಠಿ ಸಮಾಜ ಶಿವಾಜಿ ಅವರನ್ನ ನೆನದು ಬಿಜೆಪಿಯನ್ನ ಬೆಂಬಲಿಸಬೇಕು ಎಂದು ಈರಣ್ಣ ಕಡಾಡಿ ಹೆಳಿಕೆ ನೀಡಿದ್ದಾರೆ




