Breaking NewsLatestಇತರ ಕ್ರೀಡೆಕ್ರೀಡೆ

ಇಟಲಿಗೆ ಯೂರೋ ಚಾಂಪಿಯನ್ ಪಟ್ಟ

ಲಂಡನ್ : ಫೈನಲ್ ಪಂದ್ಯದಲ್ಲಿ ನಡೆದ ಪೆನಾಲ್ಟಿ ಶೂಟೌಟ್ ನಲ್ಲಿ ಇಂಗ್ಲೆಂಡ್ ವಿರುದ್ಧ 3-2 ಗೋಲುಗಳ ಅಂತರದಲ್ಲಿ ಜಯ ಗಳಿಸಿದ ಇಟಲಿ ಯೂರೋ ಫುಟ್ಬಾಲ್ ಚಾಂಪಿಯನ್ ಪಟ್ಟ ಗೆದ್ದುಕೊಂಡಿದೆ.

ನಿಗದಿತ ಅವಧಿಯಲ್ಲಿ ಪಂದ್ಯ 1-1 ಗೋಲಿನಿಂದ ಸಮಬಲಗೊಂಡಿತ್ತು. ವಿಂಬ್ಲೇ ಅಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ನ ಮಾರ್ಕಸ್ ಜಸ್ಫೊರ್ಡ್, ಜಾರ್ಡನ್ ಸ್ಯಾಂಚೊ ಮತ್ತು ಬುಕಾಯೊ ಸಾಕಾ ಪೆನಾಲ್ಲಿ ಶೂಟೌಟ್ ನಲ್ಲಿ ವಿಫಲರಾದ್ದು ಇಂಗ್ಲೆಂಡ್ ನ ಸೋಲಿಗೆ ಕಾರಣವಾಯಿತು. ಇಟಲಿಯ ಗೋಲ್ ಕೀಪರ್ ಗಿಯಾನ್ಲುಗಿ ಡೊನ್ನರುಮ್ಮ ಸತತ ಎರಡು ಗೋಲುಗಳನ್ನು ತಡೆದು ಎರಡನೇ ಬಾರಿಗೆ ಚಾಂಪಿಯನ್ ಪಟ್ಟ ಗೆಲ್ಲಲು ನೆರವಾದರು.

2006ರ ವಿಶ್ವಕಪ್ ಗೆದ್ದ ನಂತರ ಇಟಲಿ ಗೆದ್ದಿರುವ ಪ್ರಮುಖ ಟ್ರೋಫಿ ಇದಾಗಿದೆ. 1968ರಲ್ಲಿ ಯೂರೋಪಿಯನ್ ಚಾಂಪಿಯನ್ಷಿಪ್ ಗೆದ್ದ ಇಟಲಿ ಈಗ ಎರಡನೇ ಬಾರಿಗೆ ಈ ಸಾಧನೆ ಮಾಡಿದೆ.‌ 2000 ಮತ್ತು 2012ರಲ್ಲಿ ಫೈನಲ್ ತಲುಪಿದ್ದ ಇಟಲಿ ಅನುಕ್ರಮವಾಗಿ ಫ್ರಾನ್ಸ್ ಮತ್ತು ಸ್ಪೇನ್ ಗೆ ಶರಣಾಗಿತ್ತು. 1966ರಲ್ಲಿ ವಿಶ್ವಕಪ್ ಗೆದ್ದ ನಂತರ ಇಂಗ್ಲೆಂಡ್ ಯಾವುದೇ ಪ್ರಮುಖ ಟೂರ್ನಿ ಗೆದ್ದಿರಲಿಲ್ಲ.

ಪಂದ್ಯ ಆರಂಭಗೊಂಡ 2ನೇ ನಿಮೊಷದಲ್ಲಿ ಲ್ಯೂಕ್ ಶಾ ಗಳಿಸಿದ ಗೋಲಿನಿಂದ ಇಂಗ್ಲೆಂಡ್ ಮುನ್ನಡೆ ಕಂಡಿತ್ತು. ಇದು ಯೂರೋ ಫೈನಲ್ ಇತಿಹಾಸದಲ್ಲೇ ದಾಖಲಾದ ವೇಗದ ಗೋಲಾಗಿದೆ.
67ನೇ ನಿಮಿಷದಲ್ಲಿ ಇಟಲಿಯ ಲಿಯೊನಾರ್ಡೊ ಬೌನ್ಸಿ ಗಳಿಸಿದ ಗೋಲು ಪಂದ್ಯವನ್ನು ಸಮಬಲಗೊಳಿಸಿತು.

Spread the love

Related Articles

Leave a Reply

Your email address will not be published. Required fields are marked *

Back to top button