ಇತರ ಕ್ರೀಡೆಕ್ರೀಡೆಚಿಕ್ಕಮಗಳೂರು
ರಾಷ್ಟ್ರಮಟ್ಟದ ಥ್ರೋಬಾಲ್ನಲ್ಲಿ ಚಿನ್ನದ ಪದಕ

ಚಿಕ್ಕಮಗಳೂರು: ರಾಷ್ಟ್ರಮಟ್ಟದ ಥ್ರೋಬಾಲ್ ಚಾಂಪಿಯನ್ಷಿಪ್ನಲ್ಲಿ ವಂದನ ಎಸ್ ನಾಯಕ್ ಹಾಗೂ ಗುರುಮೂರ್ತಿ ಚಿನ್ನದ ಪದಕ ಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಇತ್ತೀಚೆಗೆ ಅಮೃತ್ ಸರ್ ನಲ್ಲಿ ನಡೆದ ನಾಲ್ಕನೇ ಜೂನಿಯರ್ ರಾಷ್ಟ್ರೀಯ ಚಾಂಪಿಯನ್ಶಿಪ್ ನಲ್ಲಿ ಸೈಂಟ್ ಜೋಸೆಫ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ವಂದನ ಕರ್ನಾಟಕದ ಬೆಂಗಳೂರು ತಂಡದಲ್ಲಿ ಆಯ್ಕೆಯಾಗಿ ತಮಿಳುನಾಡು ತಂಡದೊಂದಿಗೆ ಅಂತಿಮವಾಗಿ ಸೆಣಸಾಡಿ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ. ಹಾಗೆಯೇ ಪುರುಷರ ನಾಲ್ಕನೇ ಸೀನಿಯರ್ ಚಾಂಪಿಯನ್ಶಿಪ್ನಲ್ಲಿ ಗುರುಮೂರ್ತಿಗೆ ಚಿನ್ನದ ಪದಕ ಲಭಿಸಿದೆ.
ಚಿನ್ನದ ಪದಕ ವಿಜೇತ ವಂದನ ಅವರಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಮಲ್ಲಿಕಾರ್ಜುನ್ ಸನ್ಮಾನಿಸಿ ಗೌರವಿಸಿದರು.




