
ನವದೆಹಲಿ: ದೆಹಲಿಯಲ್ಲಿ ಇದೀಗ ಎಪ್ರಿಲ್ ತಿಂಗಳು ಬೆಸಿಗೆಯ ಪ್ರಖರ ಬಿಸಿಲು ಯಾವ ರೀತಿ ಇರುತ್ತದೆ ಎನ್ನುವುದನ್ನು ತೋರಿಸಲು ಹೊರಟಿದೆ. ಬುಧವಾರ ಅಂದರೆ ಇಂದಿನಿಂದ ದೆಹಲಿಯ ಗರಿಷ್ಠ ತಾಪಮಾನ 40 ಡಿಗ್ರಿಯನ್ನು ಮುಟ್ಟುತ್ತದೆ ಎಂದು ಹವಾಮಾನ ಇಲಾಖೆ ಹೇಳಿದೆ. ತಾಪಮಾನ ಶನಿವಾರದ ಹೊತ್ತಿಗೆ 43 ಡಿಗ್ರಿ ಸೆಲ್ಶಿಯಸ್ಗೆ ಏರಲಿದೆಯೆಂದು ಐಎಂಡಿ ತಿಳಿಸಿದೆ.
ಭಾರತೀಯ ಹವಾಮಾನ ಇಲಾಖೆ ಪ್ರಕಾರ ಕನಿಷ್ಟ ಒಂದು ವಾರದವರೆಗೆ ಯಾವುದೇ ಪರಿಹಾರ ಸಿಗಲು ಸಾಧ್ಯವಿಲ್ಲ. ನಗರದ ಅಧಿಕೃತ ಮಾರ್ಕರ್ ಎಂದು ಪರಿಗಣಿಸಲಾದ ಸಫ್ದರ್ಜಂಗ್ ವೀಕ್ಷಣಾಲಯವು ಕಳೆದ ಬುಧವಾರ 39.6 ಡಿಗ್ರಿ ಸೆಲ್ಸಿಯಸ್ನ ಗರಿಷ್ಟ ತಾಪಮಾನವನ್ನು ದಾಖಲಿಸಿದೆ. ಇದು ಈ ಋತುವಿನ ಇದುವರೆಗಿನ ಗರಿಷ್ಠ ತಾಪಮಾನವಾಗಿದೆ.
ಕಳೆದ ಮಾರ್ಚ್ನಿಂದಲೇ ದೆಹಲಿಯ ಹಲವು ಭಾಗಗಳಲ್ಲಿ ಗರಿಷ್ಟ ತಾಪಮಾನವು 40 ಡಿಗ್ರಿ ಸೆಲ್ಸಿಯಸ್ಗಿಂತ ಹೆಚ್ಚಿದೆ. IMD ಅಧಿಕಾರಿಗಳ ಇಲ್ಲಿನ ಶುಷ್ಕ ವಾತಾವರಣವು ತಿವ್ರ ಬಿಸಿ ವಾತಾವರಣಕ್ಕೆ ಕಾರಣವಾಗಿದೆ ಎಂದಿದ್ದಾರೆ.




