ರಾಜ್ಯಸುದ್ದಿ

ಕೆಲಸ ಕೊಡಿಸುವ ನೆಪದಲ್ಲಿ ವೇಶ್ಯಾವಾಟಿಕೆ: ನಾಲ್ವರು ಅಪ್ರಾಪ್ತ ಯುವತಿಯರ ರಕ್ಷಣೆ

ನಾಲ್ವರು ಅಪ್ರಾಪ್ತರನ್ನು ವೇಶ್ಯಾವಾಟಿಕೆಗೆ ತಳ್ಳಿದ ಆರೋಪದ ಮೇಲೆ ಓರ್ವ ಮಹಿಳೆ ಹಾಗೂ ಆಕೆಯ ಸಹಚರರನ್ನ ಚೆನ್ನೈ ಪೊಲೀಸರು ಬಂಧಿಸಿದ್ದಾರೆ.

ಆಸ್ಪತ್ರೆ ಹಾಗೂ ಬ್ಯೂಟಿ ಪಾರ್ಲರ್​ಗಳಲ್ಲಿ ಕೆಲಸ ಕೊಡಿಸುವ ನೆಪದಲ್ಲಿ ತಮಿಳುನಾಡಿನ ಗ್ರಾಮವೊಂದರಿಂದ ಚೆನ್ನೈಗೆ ಹುಡುಗಿಯರನ್ನ ಕರೆತಂದಿದ್ದ ಮಹಿಳೆ ಬಳಿಕ ಬಲವಂತವಾಗಿ ಅವರನ್ನು ಬಾಡಿಗೆ ಮನೆಯೊಂದರಲ್ಲಿ ಕೂಡಿ ಹಾಕಿದ್ದಳು. ಅಲ್ಲಿ ತನ್ನ ಸಹಚರರಿಂದ ಲೈಂಗಿಕ ಕಿರುಕುಳ ನೀಡಿದ್ದಲ್ಲದೆ ಆ ದೃಶ್ಯಗಳನ್ನ ಚಿತ್ರೀಕರಿಸಿಕೊಂಡು ಬೆದರಿಕೆ ಹಾಕಿ ತನ್ನ ಕೆಲಸ ಮಾಡಿಸುತ್ತಿದ್ದಳು.

ಸಂತ್ರಸ್ತ ಬಾಲಕಿಯರು 14ರಿಂದ 17 ವರ್ಷ ವಯಸ್ಸಿನವರಾಗಿದ್ದು ಚೆನ್ನೈನ ಫ್ಲವರ್ ಬಜಾರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಕ್ಷಿಸಲಾಗಿದೆ. ಬಾಲಕೀಯರು ಇದೀಗ ಸರ್ಕಾರ ಗೃಹದಲ್ಲಿ ರಕ್ಷಣೆ ಪಡೆದಿದ್ದಾರೆ. ಗಣರಾಜ್ಯೋತ್ಸವ ದಿನ ಬಾಲಕಿಯರನ್ನ ಬೆಂಗಳೂರಿಗೆ ಶಿಫ್ಟ್ ಮಾಡಲು ಮಹಿಳೆ ನಿರ್ಧರಿಸಿದ್ದಳು. ಆದರೆ ಈ ನಡುವೆ ಬಾಲಕಿಯೊಬ್ಬಳು ಪೊಲೀಸರನ್ನ ಸಂಪರ್ಕಿಸಿ ವಿಷಯ ತಿಳಿಸಿದ್ದಳು. ಅದರಂತೆ ಸ್ಥಳಕ್ಕೆ ಬಂದ ಪೊಲೀಸ್ ಪೇದೆಗಳು ಸಂತ್ರಸ್ತ ಬಾಲಕಿಯರನ್ನ ರಕ್ಷಿಸುವ ಬದಲು ಆರೋಪಿಗಳಿಂದ ಲಂಚ ಪಡೆದು ಅವರಿಗೇ ಸಹಾಯ ಮಾಡಿದ್ದರು.

ಸಂತ್ರಸ್ತ ಬಾಲಕಿಯರನ್ನ ಬೆಂಗಳೂರಿಗೆ ಸಾಗಿಸುವ ಯತ್ನದ ನಡುವೆ ತಪ್ಪಿಸಿಕೊಂಡ ಬಾಲಕಿ ರಾತ್ರಿ ಗಸ್ತು ತಿರುಗುತ್ತಿದ್ದ ಪೊಲೀಸರಿಗೆ ವಿಷಯ ತಿಳಿಸಿದ್ದಾಳೆ. ಬಾಲಕಿ ನೀಡಿದ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಉಳಿದ ಬಾಲಕಿಯರನ್ನ ರಕ್ಷಿಸಿದ್ದು, ಹಿರಿಯ ನಾಗರಿಕರಾದ ಚಲೇಮಾ ಕೈತುನ್, ಅನ್ವರ್ ಹುಸೇನ್, ಅಲ್ಲಾವುದ್ದೀನ್ ಹಾಗೂ ಮೈನುದ್ದೀನ್ ಎಂಬುವವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button