ರಾಜ್ಯ
ನಾಯಕತ್ವ ಬದಲಾವಣೆಯ ಚರ್ಚೆಯೇ ನಡೆದಿಲ್ಲವೆಂದ ಕಟೀಲ್

ಬಿಜೆಪಿಯಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಈ ಬಗ್ಗೆ ಚರ್ಚೆಗಳು ಅಪ್ರಸ್ತುತ. ರಾಷ್ಟ್ರೀಯ ನಾಯಕರಲ್ಲಾಗಲೀ, ಶಾಸಕಾಂಗ ಪಕ್ಷದಲ್ಲಾಗಲೀ ನಾಯಕತ್ವ ಬದಲಾವಣೆಯ ಚರ್ಚೆಯೇ ನಡೆದಿಲ್ಲ ಎಂದು ನಳೀನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನಮಗೆ ಯಡಿಯೂರಪ್ಪನವರೇ ಆದರ್ಶ. ಅವರು ಎಂದೂ ಅಧಿಕಾರಕ್ಕೆ ಅಂಟಿಕೊಂಡು ಕೂತವರಲ್ಲ. ಪಕ್ಷದಲ್ಲಿ ಈ ರೀತಿಯ ಯಾವುದೇ ಚರ್ಚೆಗಳಿಲ್ಲ. ಪಕ್ಷದ ಹೈಕಮಾಂಡ್ ಸೂಚಿಸಿದರೆ ರಾಜೀನಾಮೆ ನೀಡುತ್ತೇನೆಂದು ಹೇಳಿದ್ದಾರೆ. ನಮ್ಮ ಸರ್ವಸಮ್ಮತದ ನಾಯಕ ಯಡಿಯೂರಪ್ಪ ಅವರನ್ನು ಬದಲಾವಣೆಯ ಪ್ರಶ್ನೆಯೇ ಇಲ್ಲ. ಸರ್ಕಾರದಲ್ಲಿ ಯಾವುದೇ ರೆಬೆಲ್ಗಳಿಲ್ಲ. ಸರ್ಕಾರ ನಡೆಸುವಾಗ ಕೆಲವರಲ್ಲಿ ಸಹಜವಾದ ಭಾವನೆ, ನೋವುಗಳಿರುತ್ತವೆ. ಅದೆಲ್ಲವನ್ನೂ ಸರಿಪಡಿಸಲಾಗುತ್ತಿದೆ ಎಂದರು.




