ರಾಜ್ಯ
ಲಾಕ್ಡೌನ್ ಮುಂದುವರಿಕೆ ವಿಚಾರ; ಶನಿವಾರ ಸರ್ಕಾರದ ನಿರ್ಧಾರ

ರಾಜ್ಯದಲ್ಲಿ ಲಾಕ್ಡೌನ್ ವಸ್ತರಣೆ ಆಗುತ್ತದೊ ಇಲ್ಲವೊ ಎನ್ನುವುದನ್ನು ಸರ್ಕಾರ ಶನಿವಾರ ಪ್ರಕಟಿಸಲಿದೆ. ಇನ್ನೂ 2 ವಾರಗಳವರೆಗೆ ಮುಂದುವರಿಸುವ ಸಾಧ್ಯತೆ ಪರಿಣತರ ಸಲಹೆಯ ಹಿನ್ನೆಲೆಯಲ್ಲಿ ಇತ್ತು. ಸಚಿವರು ಮತ್ತು ಪರಿಣತರೊಂದಿಗಿನ ಸಭೆಯ ಬಳಿಕ ಸಿಎಂ ಯಡಿಯೂರಪ್ಪ ಈ ವಿಚಾರ ಪ್ರಕಟಿಸುವ ನಿರೀಕ್ಷೆಯೂ ಇತ್ತು.
ಆದರೆ ಈ ಬಗ್ಗೆ ಶನಿವಾರವೇ ಗೊತ್ತಾಘಲಿದೆ. ಅಲ್ಲಿಯವರೆಗೆ ತನ್ನ ನಿರ್ಧಾರವನ್ನು ಸರ್ಕಾರ ಗುಟ್ಟಾಗಿಡಲಿದೆ.
ಆದರೆ, ರಫ್ತು ವಲಯದ ಕೈಗಾರಿಕೆಗಳಿಗೆ ಶೇ.50ರಷ್ಟು ಸಿಬ್ಬಂದಿಯನ್ನು ಇಟ್ಟುಕೊಂಡು ಕಾರ್ಯಾರಂಭ ಮಾಡಲು ಸರ್ಕಾರ ಅನುಮತಿ ನೀಡಿದೆ. ಈ ರಿಯಾಯ್ತಿ ನಾಳೆಯಿಂದಲೇ ಅನ್ವಯವಾಗುವಂತೆ ಸರ್ಕಾರ ಆದೇಶ ಹೊರಡಿಸಿದೆ.
ಶನಿವಾರ ಮತ್ತೊಮ್ಮೆ ಸಚಿವರೊಂದಿಗೆ ಸಭೆ ನಡೆಸಲಿರುವ ಸಿಎಂ, ಆ ಬಳಿಕವೇ ನಿರ್ಧಾರ ಪ್ರಕಟಿಸುವ ಸಾಧ್ಯತೆಯಿದೆ.




