
ಹೊಸದೆಹಲಿ: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ರಾಹುಲ್ ಗಾಂಧಿ ಮತ್ತೊಮ್ಮೆ ಮಾತಿನ ಚಾಟಿ ಬೀಸಿದ್ದಾರೆ. ರಾಹುಲ್ ತಮ್ಮ ಟ್ವೀಟ್ನಲ್ಲಿ ಪ್ರಧಾನಿ ದೈನಂದಿನ ಕೆಲಸಗಳನ್ನು ಈ ರೀತಿ ಪಟ್ಟಿ ಮಾಡಿದ್ದಾರೆ: ಪೆಟ್ರೋಲ್, ಡೀಸೆಲ್ ಮತ್ತು ಗ್ಯಾಸ್ ಬೆಲೆಗಳನ್ನು ಹೆಚ್ಚಿಸುವುದು. ರೈತರನ್ನು ಮತ್ತಷ್ಟು ಹೆಚ್ಚು ಅಸಹಾಯಕರನ್ನಾಗಿ ಮಾಡುವುದು. ದೇಶದ ನಾಗರಿಕರಿಗೆ ಪೊಳ್ಳು ಕನಸುಗಳನ್ನು ತೋರಿಸುವುದು!
ರಾಹುಲ್ ಗಾಂಧಿ ತಮ್ಮ ಟ್ವೀಟ್ನಲ್ಲಿ RozSubahKiBaate ಎಂಬ ಹ್ಯಾಶ್ಟ್ಯಾಗ್ ಅನ್ನು ಬಳಸಿದ್ದು, ಹಲವಾರು ವಿಷಯಗಳ ಕುರಿತು ಪ್ರಧಾನಿಯನ್ನು ಟೀಕಿಸಿದ್ದಾರೆ. ಇದರಲ್ಲಿ ಮೇಲೆ ಹೇಳಿದವುಗಳ ಜೊತೆಗೆ ಮುಂದುವರೆಸಿ ಯುವಕರಿಗೆ ಉದ್ಯೋಗದ ಪೊಳ್ಳು ಕನಸುಗಳನ್ನು ತೋರಿಸುವುದು ಹೇಗೆ, ಯಾವ ಸಾರ್ವಜನಿಕ ವಲಯದ ಕಂಪನಿ ಮಾರಾಟ ಮಾಡುವುದು ಮತ್ತು ರೈತರನ್ನು ಹೇಗೆ ಅಸಹಾಯಕರನ್ನಾಗಿ ಮಾಡುವುದು ಮುಂತಾದವುಗಳು ಮೋದಿಜಿಯವರ ದೈನಂದಿನ ಕೆಲಸಗಳು ಎಂದು ರಾಹುಲ್ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.




