ರಾಷ್ಟ್ರೀಯ

ಹೊಸ ಐಟಿ ನಿಯಮಗಳ ವಿರುದ್ಧ ತಕರಾರು; ಸರ್ಕಾರದ ವಿರುದ್ಧ ಸಿಡಿದ ಟ್ವಿಟರ್

ಕೇಂದ್ರಸರ್ಕಾರದ ಹೊಸ ಐಟಿ ಕಾಯ್ದೆ ವಿರುದ್ಧ ಟ್ವಿಟರ್ ಸಿಡಿದು ನಿಂತಿದೆ. ಹೊಸ ನಿಯಮಗಳ ಅನುಷ್ಠಾನಕ್ಕೆ ಪೊಲೀಸರ ಮೂಲಕ ಬೆದರಿಸುವ ತಂತ್ರ ಬಳಸುತ್ತಿರುವುದು ಕಳವಳಕಾರಿ ಎಂದು ಅದು ಆಕ್ಷೇಪ ಎತ್ತಿದೆ.

ಡಿಜಿಟಲ್ ವೇದಿಕೆಯ್ಲಿ ಪ್ರಕಟವಾಗುವ ಎಲ್ಲ ವಿಚಾರಕ್ಕೂ ಕಂಪನಿಯ ನೋಡಲ್ ಅಧಿಕಾರಿಯನ್ನೇ ಹೊಣೆ ಮಾಡುವ ಕ್ರಮದ ಔಚಿತ್ಯವನ್ನು ಟ್ವಿಟರ್ ಪ್ರಶ್ನಿಸಿದೆ. ಹೊಸ ನಿಯಮದಿಂದ ನಮ್ಮ ಗ್ರಾಹಕರ ಸಂಪೂರ್ಣ ಮಾಹಿತಿ ಪಡೆದುಕೊಳ್ಳುವ ಅಧಿಕಾರವು ಸರ್ಕಾರಕ್ಕೆ ಸಿಗುವುದು ಕಳವಳದ ಸಂಗತಿಯಾಗಿದೆ ಎಂದು ಟ್ವಿಟರ್ ಹೇಳಿದೆ.

ಮುಕ್ತ ಮತ್ತು ಪ್ರಜಾಸತ್ತಾತ್ಮಕ ನೀತಿಗಳಿಗೆ ಇವೆಲ್ಲವೂ ವಿರುದ್ಧವಾದವುಗಳಾಗಿವೆ ಎಂದು ಟ್ವಿಟರ್ ತಕರಾರೆತ್ತಿದೆ.

ಹೊಸ ನಿಯಮಗಳು ಆಕ್ರಮಣಕಾರಿಯಾಗಿದ್ದು, ಜನರ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ಬರಲಿದೆ ಎಂಬ ಆತಂಕವನ್ನು ಟ್ವಿಟರ್ ವ್ಯಕ್ತಪಡಿಸಿದೆ.

ಇದೆಲ್ಲದರ ನಡುವೆಯೂ ಇಲ್ಲಿನ ಕಾನೂನನ್ನು ಪಾಲಿಸಲು ಬದ್ಧವಿರುವುದಾಗಿ ಟ್ಇಟರ್ ಸ್ಪಷ್ಟಪಡಿಸಿದೆ.

Related Articles

Leave a Reply

Your email address will not be published. Required fields are marked *

Back to top button