ರಾಷ್ಟ್ರೀಯವಿದೇಶ

ರಷ್ಯಾ ಉಕ್ರೇನ್ ಯುದ್ಧ: ಝೆಲೆನ್ಸ್ಕಿಯ ಜೊತೆ ಮಾತಾಡಿದ ಪ್ರಧಾನಿ ಮೋದಿ

ನವದೆಹಲಿ/ಉಕ್ರೇನ್: ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಜೊತೆ ಮೋದಿ ದೂರವಾಣಿ ಕರೆ ಮಾಡಿ ಮಾತುಕತೆಯಾಡಿದ್ದಾರೆ. ಸುಮಾರು 35 ನಿಮಿಷಗಳ ಕಾಲ ಉಭಯ ನಾಯಕರ ಮಧ್ಯೆ ನಡೆದ ಈ ಮಾತುಕತೆಯಲ್ಲಿ ಮೋದಿ ಭಾರತೀಯ ವಿದ್ಯಾಥಿಗಳ ಸ್ಥಳಾಂತರದ ಬಗ್ಗೆ ಉಕ್ರೇನ್ ಅಧ್ಯಕ್ಷರ ಜೊತೆ ಮಾತುಕತೆಯಾಡಿದ್ದಾರೆ.

ಮಾತುಕತೆಯ ಸಂದರ್ಭದಲ್ಲಿ ಭಾರತೀಯ ವಿದ್ಯಾರ್ಥಿಗಳನ್ನು ಸ್ಥಳಾಂತರಿಸುವ ಸಂದರ್ಭದಲ್ಲಿ ಉಕ್ರೇನ್ ಸಹಕರಿಸಿದ್ದಕ್ಕಾಗಿ ಮೋದಿ ಝೆಲೆನ್ಸ್ಕಿಗೆ ಧನ್ಯವಾದ ಹೇಳಿದ್ದಾರೆ. ಹಾಗೆಯೇ ಉಕ್ರೇನ್ ಮತ್ತು ರಷ್ಯಾ ಮಾತುಕತೆಯಲ್ಲಿ ತೊಡಗಿದ್ದಕ್ಕಾಗಿ ಝೆಲೆನ್ಸ್ಕಿಯನ್ನು ಮೋದಿ ಪ್ರಶಂಸಿಸಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button