ರಾಷ್ಟ್ರೀಯ

ಅಫ್ಘಾನ್-ಭಾರತ ನಡುವಿನ ಆಮದು ರಫ್ತಿಗೆ ತಾಲಿಬಾನ್ ಬ್ರೇಕ್

ನವದೆಹಲಿ: ಅಫ್ಘಾನ್ ಮತ್ತು ಭಾರತದ ನಡುವೆ ಇದ್ದ ಎಲ್ಲಾ ರೀತಿಯ ಆಮದು ಹಾಗೂ ರಫ್ತು ಪ್ರಕ್ರಿಯೆಯನ್ನು ತಾಲಿಬಾನ್ ಆಡಳಿತ ಸ್ಥಗಿತಗೊಳಿಸಿದೆ.

ಎರಡೂ ದೇಶಗಳ ನಡುವೆ ಸಾಕಷ್ಟು ಪ್ರಮಾಣದ ಸರಕು ಸಾಮಗ್ರಿಗಳು ಪಾಕಿಸ್ತಾನ ನೆಲದ ಮೂಲಕ ಸಾಗಣೆಯಾಗುತ್ತಿತ್ತು. ಈಗ ಎಲ್ಲಾ ರೀತಿಯ ಸರಕು ಸಾಗಾಟ ಸ್ಥಗಿತಗೊಳಿಸಲಾಗಿದೆ ಎಂದು ಭಾರತೀಯ ರಫ್ತು ಸಂಘಟನೆ ಒಕ್ಕೂಟ ಎಫ್ಐಇಓ ಮಹಾನಿರ್ದೇಶಕ ಡಾ.ಅಜಯ್ ತಿಳಿಸಿದ್ದಾರೆ.

ವಾಣಿಜ್ಯ, ಹೂಡಿಕೆಯಲ್ಲಿ ಅತಿದೊಡ್ಡ ಪಾಲುದಾರ ದೇಶವಾಗಿ ಭಾರತವು ಅಫ್ಘಾನಿನ ಜೊತೆ ಬಹುಕಾಲದಿಂದ ವ್ಯವಹರಿಸುತ್ತಿದೆ. ಇದುವರೆಗೆ 835 ದಶಲಕ್ಷ ಡಾಲರ್ ಮೌಲ್ಯದ ಸರಕು ಸಾಮಗ್ರಿಗಳನ್ನು ಭಾರತವು ಅಫ್ಘಾನಿಗೆ ರಫ್ತು ಮಾಡಿದೆ. ಅವಧಿಯಲ್ಲಿ 510 ದಶಲಕ್ಷ ಡಾಲರ್ ಮೌಲ್ಯದ ಸರಕುಗಳನ್ನು ಭಾರತ ಆಮದು ಮಾಡಿಕೊಂಡಿದೆ. ಭಾರತವು 3 ಶತಕೋಟಿ ಡಾಲರ್ ಹೂಡಿಕೆಯನು ಅಫ್ಘಾನಿನಲ್ಲಿ ಮಾಡಿದೆ. ಅಲ್ಲದೆ ಅಲ್ಲಿ 400ಕ್ಕೂ ಹೆಚ್ಚು ಅಭಿವೃದ್ಧಿ ಯೋಜನೆಗಳನ್ನು ಭಾರತ ಕೈಗೆತ್ತಿಕೊಂಡಿದ್ದು, ಕೆಲವು ಪ್ರಗತಿಯಲ್ಲಿವೆ ಎಂದು ಡಾ.ಅಜಯ್ ಮಾಹಿತಿ ನೀಡಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button