ಶಾಸಕಿ ದೂರು: ಎಸ್ಪಿ ವರ್ಗಾವಣೆ

ಮುಂಬೈ (ಮಹಾರಾಷ್ಟ್ರ): ಬಿಜೆಪಿ ಶಾಸಕಿ ನಮಿತಾ ಮುಂದ್ರಾ ಅವರ ಬೀಡ್ನಲ್ಲಿ ಕಾನೂನು ಸುವ್ಯವಸ್ಥೆ ಕುರಿತು ಆರೋಪ ಮಾಡಿದ್ದಕ್ಕಾಗಿ ಸೋಮವಾರ ಮಹಾರಾಷ್ಟ್ರ ವಿಧಾನಸಭೆಯೊಳಗೆ ಗಲಾಟೆ ಸೃಷ್ಟಿಯಾಯಿತು. ಇದರಿಂದಾಗಿ ಗೃಹ ಸಚಿವ ದಿಲೀಪ್ ವಾಲ್ಸೆ ಪಾಟೀಲ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನು ರಜೆಯ ಮೇಲೆ ಕಳುಹಿಸಿದರು.
ಬಿಜೆಪಿ ಶಾಸಕರು ವಿಧಾನಸೌಧದ ಬಾವಿಗಿಳಿದು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿ, ಸಂಬಂಧಪಟ್ಟ ಎಸ್.ಪಿ.ವಿರುದ್ಧ ಅಮಾನತಿಗೆ ಒತ್ತಾಯಿಸಿದರು. ಬೀಡಿನಲ್ಲಿ ಕಾನೂನು ಸುವ್ಯವಸ್ಥೆಯನ್ನು ಪ್ರಶ್ನಿಸಿದ ಬಿಜೆಪಿ ಶಾಸಕಿ, ಅಕ್ರಮ ಮದ್ಯವನ್ನು ಬಹಿರಂಗವಾಗಿ ಮಾರಾಟ ಮಾಡುವುದನ್ನು ನಾನು ನೋಡಿದ್ದೇನೆ ಮತ್ತು ದುಷ್ಕರ್ಮಿಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲು ಎಸ್ಪಿ ವಿಫಲರಾಗಿದ್ದಾರೆ ಎಂದು ಆರೋಪಿಸಿದರು. ಅಲ್ಲಿ ಒಬ್ಬ ಮಹಿಳಾ ಎಂಎಲ್ಎ ಕೂಡ ಸುರಕ್ಷಿವಾಗಿಲ್ಲ, ಪಾನಮತ್ತರು ಅಲ್ಲಿ ಮಹಿಳೆಯರಿಗೆ ಹೇಗೆ ಬಹಿರಂಗವಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ಮುಂಡ್ರಾ ಹೇಳಿದರು. ನನ್ನ ಜೊತೆಗೂ ಇದೇ ರೀತಿಯ ಘಟನೆ ನಡೆದಿದ್ದು, ಎಸ್ಪಿಗೆ ದೂರು ದಾಖಲಿಸಲು ಹೋದಾಗ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅವರು ಆರೋಪಿಸಿದ್ದರು.




