ರಾಷ್ಟ್ರೀಯ

ಕೋವಿಡ್ ರೋಗಿಯ ಶವ ನದಿಗೆ ಎಸೆದ ಸಂಬಂಧಿಕರು; ಆಘಾತಕಾರಿ ವಿಡಿಯೋ ಬಹಿರಂಗ

ಉತ್ತರ ಪ್ರದೇಶದಿಂದ ಕೋವಿಡ್ ರೋಗಿಯ ಮೃತದೇಹವೊಂದನ್ನು ನದಿಗೆ ಎಸೆಯುವ ಆಘಾತಕಾರಿ ವಿಡಿಯೋವೊಂದು ಬೆಳಕಿಗೆ ಬಂದಿದ್ದು ಕೋವಿಡ್ ಸಂದರ್ಭದಲ್ಲಿನ ಅಮಾನವೀಯ ನಡೆಗೆ ಇದು ಮತ್ತೊಂದು ಸಾಕ್ಚಿಯಾಗಿದೆ.

ಈಗಾಗಲೇ ಅಲ್ಲಿ ಗಂಗಾನದಿಯ ತೀರದಲ್ಲಿ ಆಳವಿಲ್ಲದ ಸಮಾಧಿಯಲ್ಲಿ ಸಾವಿರಾರು ಶವಗಳನ್ನು ಸಮಾಧಿ ಮಾಡಲಾಗಿದೆ ಮತ್ತು ಕೆಲವು ಶವಗಳನ್ನು ನದಿಯಲ್ಲಿ ಎಸೆಯಲಾಗಿದೆ ಎಂದು ವಿಶ್ವದಾದ್ಯಂತ ಸುದ್ದಿಯಾಗಿತ್ತು. ನದಿಗಳಲ್ಲಿ ಮೃತ ದೇಹಗಳನ್ನು ವಿಲೇವಾರಿ ಮಾಡದಂತೆ ನೋಡಿಕೊಳ್ಳಲು ಕೇಂದ್ರವು ಉತ್ತರದ ರಾಜ್ಯಗಳಿಗೆ ಆದೇಶಿಸಿತ್ತು. ಆದರೆ, ಮೃತದೇಹಗಳ ವಿಚಾರದಲ್ಲಿ ಅಮಾನವೀಯ ನಡೆ ನಿಲ್ಲುತ್ತಿಲ್ಲ.

ಇದೀಗ ಬಯಲಿಗೆ ಬಂದಿರುವ ಘಟನೆ ಶನಿವಾರ ಚಿತ್ರೀಕರಣಗೊಂಡದ್ದಾಗಿದೆ.

ಇಬ್ಬರು ವ್ಯಕ್ತಿಗಳು ರಾಪ್ತಿ ನದಿಯ ಮೇಲಿರುವ ಸೇತುವೆಯ ಮೇಲೆ ದೇಹವನ್ನು ಎತ್ತುತ್ತಿರುವುದು ವಿಡಿಯೋದಲ್ಕಂಲಿ ಕಂಡುಬಂದಿದೆ. ಇಬ್ಬರಲ್ಲಿ ಒಬ್ಬ ಪಿಪಿಇ ಸೂಟ್‌ನಲ್ಲಿದ್ದಾನೆ.

ದೇಹವು ನಿಜಕ್ಕೂ ಕೋವಿಡ್ ರೋಗಿಯದ್ದೆಂದು ಬಲರಾಂಪುರದ ಮುಖ್ಯ ವೈದ್ಯಾಧಿಕಾರಿ ನಂತರ ದೃಢಪಡಿಸಿದ್ದಾರೆ.

ಸಂಬಂಧಿಕರು ಶವವನ್ನು ನದಿಗೆ ಎಸೆಯಲು ಪ್ರಯತ್ನಿಸಿದ್ದು ಗೊತ್ತಾದ ಬಳಿಕ ಸಂಬಂಧಿಕರ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಶವವನ್ನು ಅವರಿಗೆ ಹಸ್ತಾಂತರಿಸಲಾಗಿದೆ.

ಬಡತನ ಮತ್ತು ಅರಿವಿನ ಕೊರತೆಯಿಂದಾಗಿ ಇಂಥ ಘಟನೆಗಳು ನಡೆಯುವುದು ಹೆಚ್ಚುತ್ತಿದೆ ಎನ್ನಲಾಗುತ್ತಿದೆ..

Spread the love

Related Articles

Leave a Reply

Your email address will not be published. Required fields are marked *

Back to top button