
ದೆಹಲಿ: ಉತ್ತರ ಪ್ರದೇಶದ ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿ “ಕೋಲಿ/ಹಿಂದೂ ಜುಲಹಾ ಸಮುದಾಯ”ವನ್ನು ಸೇರಿಸಲು ಉತ್ತರ ಪ್ರದೇಶ ಸರ್ಕಾರ ಕಳಿಸಿದ ಪ್ರಸ್ತಾವನೆಯನ್ನು ಮತ್ತೊಮ್ಮೆ ಪರಿಶೀಲಿಸಲು ಅಲ್ಲಿನ ರಾಜ್ಯಸಭೆ ಸರ್ಕಾರಕ್ಕೆ ಹಿಂತಿರುಗಿಸಿದೆ.
ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆಯ ರಾಜ್ಯ ಸಚಿವ ಎ.ನಾರಾಯಣಸ್ವಾಮಿ ರಾಜ್ಯಸಭೆಗೆ ಲಿಖಿತ ಉತ್ತರದಲ್ಲಿ ಈ ಪ್ರಸ್ತಾವನೆಯನ್ನು ನಿಗದಿಪಡಿಸಿದ ವಿಧಾನಗಳಿಗೆ ಅನುಗುಣವಾಗಿ ಪರಿಶೀಲಿಸಲಾಗಿದೆ ಎಂದು ತಿಳಿಸಿದರು.
ಈ ಪ್ರಸ್ತಾಪವನ್ನು ರಿಜಿಸ್ಟ್ರಾರ್ ಜನರಲ್ ಆಫ್ ಇಂಡಿಯಾ ಬೆಂಬಲಿಸದ ಕಾರಣ, RGI ಅವಲೋಕನಗಳ ಬೆಳಕಿನಲ್ಲಿ ಅವರ ಶಿಫಾರಸನ್ನು ಪರಿಶೀಲಿಸಲು ಅಥವಾ ಮತ್ತಷ್ಟು ಸಮರ್ಥಿಸಲು ವಿನಂತಿಯೊಂದಿಗೆ ಅದನ್ನು ರಾಜ್ಯಸರ್ಕಾರಕ್ಕೆ ಹಿಂದಿರುಗಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿ ಮಾರ್ಪಾಡು, ಸೇರ್ಪಡೆ, ಹೊರಗಿಡುವಿಕೆ, ತಿದ್ದುಪಡಿಗಾಗಿ ಹಕ್ಕುಗಳನ್ನು ನಿರ್ಧರಿಸಲು ಸರ್ಕಾರವು ವಿಧಾನಗಳನ್ನು ನಿಗದಿಪಡಿಸಿದೆ. ಅದರ ಅಡಿಯಲ್ಲಿ ಸಂಬಂಧಪಟ್ಟ ರಾಜ್ಯ ಸರ್ಕಾರವು ಸಂಪೂರ್ಣ ಸಮರ್ಥನೆಗಳೊಂದಿಗೆ ಪ್ರಸ್ತಾವನೆಯನ್ನು ಪ್ರಾರಂಭಿಸಬೇಕು ಎಂದು ಅವರು ಹೇಳಿದ್ದಾರೆ.




