ರಾಷ್ಟ್ರೀಯ
ವಿಮಾನ ಪತನ, ಮಹಿಳಾ ಟ್ರೈನಿ ಪೈಲೆಟ್ ಸಾವು

ತೆಲಂಗಾಣ: ತರಬೇತಿ ವಿಮಾನ ಪತನವಾಗಿ ಮಹಿಳಾ ಪೈಲೆಟ್ ಸಾವನ್ನಪ್ಪಿರುವ ಘಟನೆ ತೆಲಂಗಾಣದ ನಲ್ಗೊಂಡ ಜಿಲ್ಲೆಯಲ್ಲಿ ನಡೆದಿದೆ. ಮೃತ ಟ್ರೈನಿ ಫೈಲಟ್ ತಮಿಳುನಾಡು ಮೂಲದ ಮಹಿಮಾ ಎಂದು ತಿಳಿದು ಬಂದಿದೆ. ಮೃತ ಮಹಿಮಾ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಮಚೆರ್ಲಾದಲ್ಲಿರುವ ಫ್ಲೈಟೆಕ್ ಏವಿಯೇಷನ್ ಅಕಾಡೆಮಿಯಲ್ಲಿ ಟ್ರೈನಿ ಪೈಲಟ್ ಆಗಿದ್ದರು ಎಂದು ನಲ್ಗೊಂಡ ಎಸ್ಪಿ ರೆಮಾ ರಾಜೇಶ್ವರಿ ತಿಳಿಸಿದ್ದಾರೆ.
ಮಹಿಮಾ ಅಕಾಡೆಮಿಯಿಂದ ಬೆಳಗ್ಗೆ ಸೆಸ್ನಾ ಟ್ರೈನಿ ವಿಮಾನದಲ್ಲಿ ಟೇಕಾಫ್ ಆಗಿದ್ದು, ನಲ್ಗೊಂಡ ಜಿಲ್ಲೆಯ ಪೆಡವೂರ ಮಂಡಲದ ತುಂಗತುರ್ಥಿ ಗ್ರಾಮದಲ್ಲಿ ವಿಮಾನ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.




