Breaking NewsLatestಮೆಟ್ರೋರಾಜಕೀಯರಾಜ್ಯಸುದ್ದಿ

ನೈಟ್ ಕರ್ಫ್ಯೂ ವಾಪಸ್ ಪಡೆಯಲು ರಾಜ್ಯ ಸರ್ಕಾರಕ್ಕೆ ಡಿ ಕೆ ಶಿವಕುಮಾರ್ ಒತ್ತಾಯ

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಹಾವಳಿ ಹೆಚ್ಚುತ್ತಿದೆ. ಇದನ್ನು ತಡೆಗಟ್ಟುವ ಸಲುವಾಗಿ ಸರ್ಕಾರ ನೈಟ್ ಕರ್ಫ್ಯೂ ವಿಧಿಸಿದ್ದಾರೆ. ಇದೀಗ ನೈಟ್ ಕರ್ಫ್ಯೂ ವಾಪಸ್ ಪಡೆಯುವಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಒತ್ತಾಯಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೋನಾ ಪಾಸಿಟಿವ್ ಕೇಸ್ ಕಡಿಮೆ ಇದ್ದಾಗ ವೀಕೆಂಡ್ ಕರ್ಫ್ಯೂ ವಿಧಿಸಿದ್ದರು. ಸರ್ಕಾರ ಅವೈಜ್ಞಾನಿಕ ನಿಯಮ ಜಾರಿ ಮಾಡುತ್ತಿದೆ. ಸರ್ಕಾರ ಆರ್ಥಿಕ ಪರಿಸ್ಥಿತಿಯನ್ನ ನೋಡಬೇಕು. ಆಂದ್ರ ತೆಲಂಗಾಣದಲ್ಲಿ ಯಾವುದೇ ಕರ್ಫ್ಯೂ ಇಲ್ಲ. ರಾಜ್ಯದಲ್ಲಿ ಯಾಕೆ ಕರ್ಪ್ಯೂ ಜಾರಿ ಮಾಡಿದ್ದೀರಿ. ರಾಜ್ಯದಲ್ಲಿ ನೈಟ್ ಕರ್ಫ್ಯೂ ಕೂಡ ಬೇಕಾಗಿಲ್ಲ ಎಂದು ಕಿಡಿಕಾರಿದರು.

ವಿದ್ಯುತ್, ಹಾಲಿನ ದರ ಏರಿಕೆಗೆ ಪ್ರಸ್ತಾಪ ವಿಚಾರ ಕುರಿತು ಮಾತನಾಡಿದ ಅವರು, ಮೊದಲು ಜನರಿಗೆ ಆದಾಯದ ಮಾರ್ಗ ತೋರಿಸಲಿ ಆಮೇಲೆ ದರ ಏರಿಕೆ ಬಗ್ಗೆ ಚರ್ಚಿಸಲಿ ಎಂದು ವಾಗ್ದಾಳಿ ನಡೆಸಿದರು.

Spread the love

Related Articles

Leave a Reply

Your email address will not be published. Required fields are marked *

Back to top button