
ಲಕ್ನೋ: ಉತ್ತರಪ್ರದೇಶದ ಗೋರಖನಾಥ ದೇವಾಲಯವನ್ನು ಬಲವಂತವಾಗಿ ಪ್ರವೇಶಿಸಿ ಅಲ್ಲಿ ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿಯ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಅಹ್ಮದ್ ಮುರ್ತಾಜಾ ಅಬ್ಬಾಸಿ ಎಂದು ಗುರುತಿಸಿದ್ದಾರೆ. ಈ ವ್ಯಕ್ತಿಯ ಹೆಚ್ಚಿನ ವಿಚಾರಣೆಗಾಗಿ ಉತ್ತರ ಪ್ರದೇಶ ಭಯೋತ್ಪಾದನಾ ನಿಗ್ರಹ ದಳ (ATS) ಬುಧವಾರ ತನ್ನ ಪ್ರಧಾನ ಕಛೇರಿಗೆ ಕರೆದೊಯ್ದಿದೆ.
ಲಕ್ನೋದ ಈ ಕಛೇರಿಗೆ ಆರಪಿಯನ್ನು ಕರೆದೊಯ್ಯುವ ಮುನ್ನ ಅವನ ವೈದ್ಯಕೀಯ ಪರೀಕ್ಷೆ ಮಾಡಲಾಯಿತು. ಅವರ ಲ್ಯಾಪ್ಟ್ಯಾಪ್ ಮತ್ತು ಮೊಬೈಲನ್ನು ಹೆಚ್ಚಿನ ತನಿಖೆಗಾಗಿ ವಿಧಿ ವಿಜ್ಷಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಸೋಮವಾರದಂದು ಯುಪಿ ಎಟಿಎಸ್ ಮುಂಬೈ ತಲುಪಿ ಆರೋಪಿ ಮುರ್ತಾಜಾ ಕುಟುಂಬವನ್ನು ವಿಚಾರಿಸಿದಾಗ, ಆರೋಪಿ ಕಳೆದ 3 ವರ್ಷಗಳಿಂದ ತನ್ನ ಕುಟುಂಬ ಸದಸ್ಯರನ್ನು ಭೇಟಿಯಾಗಿಲ್ಲ ಎಂಬುದು ತಿಳಿದು ಬಂದಿದೆ.
ಆರೋಪಿಯ ತಂದೆ ತನ್ನ ಮಗನಿಗೆ ಮಾನಸಿಕ ಸ್ಥಿರತೆಯಿಲ್ಲ ಮತ್ತು ಅವನಿಗೆ ಅಪರಾಧ ಮಾಡುವ ಯಾವುದೇ ಯೋಜನೆ ಇಲ್ಲ ಎಂದು ಹೇಳಿದ್ದಾರೆ. ಬಾಲ್ಯದಿಂದಲೂ ತನ್ನ ಮಗ ಖಿನ್ನತೆಗೆ ಒಳಗಾಗಿದ್ದಾನೆ, ಈ ಮೊದಲು ಸಹ ಅವನು ಇದಕ್ಕಾಗಿ ವೈದ್ಯಕೀಯ ಚಿಕಿತ್ಸೆಯನ್ನು ಪಡೆದಿದ್ದಾನೆ ಎಂದು ತಂದೆ ಹೇಳಿದ್ದಾರೆ.




