ರಾಜ್ಯಸುದ್ದಿ

ಅನುಮತಿಯಿದ್ದರೂ ಏರ್​ಪೋರ್ಟ್​ನಲ್ಲಿ ತಡೆದ ಪೊಲೀಸರು

ಬೆಂಗಳೂರು (ಕರ್ನಾಟಕ): ಬೆಂಗಳೂರು ವಿಮಾನ ನಿಲ್ದಾಣದಲ್ಲಿ ತನ್ನನ್ನು ತಡೆದು ಅಮೆರಿಕಕ್ಕೆ ಹೋಗುವ ವಿಮಾನ ಹತ್ತದಂತೆ ತಡೆದಿದ್ದಾರೆ ಎಂದು ಪತ್ರಕರ್ತ ಹಾಗೂ ಮಾನವಹಕ್ಕುಗಳ ಹೋರಾಟಗಾರ ಆಕಾರ್ ಅನಿಲ್ ಪಟೇಲ್ ಬುಧವಾರ ಆರೋಪಿಸಿದ್ದಾರೆ.

ಪಟೇಲ್ ಅವರು ಹೇಳಿರುವಂತೆ ಅಮೆರಿಕ ಪ್ರವಾಸಕ್ಕೆ ನಿರ್ದಿಷ್ಟವಾಗಿ ಅನುಮತಿ ನೀಡಿದ ಗುಜರಾತ್ ನ್ಯಾಯಾಲಯದ ಆದೇಶದ ಹೊರತಾಗಿಯೂ ಅವರು ಯುಎಸ್​ಗೆ ಪ್ರಯಾಣಿಸುವುದನ್ನು ತಡೆಯಲಾಗಿದೆ ಎಂದು ಹೇಳಲಾಗಿದೆ.

ಪಟೇಲ್ ಅವರು ಪಾಸ್​ಪೋರ್ಟ್​ಗಾಗಿ ಸಲ್ಲಿಸಿದ ಅರ್ಜಿಯ ಪ್ರತಿಯನ್ನು ನ್ಯಾಯಾಲಯಕ್ಕೆ ಹಂಚಿಕೊಂಡಿದ್ದಾರೆ ಮತ್ತು ಪ್ರಧಾನ ಮಂತ್ರಿ ಕಚೇರಿಯನ್ನು ಟ್ಯಾಗ್ ಮಾಡಿದ್ದಾರೆ. ಪಟೇಲ್ ಅವರು ಹಂಚಿಕೊಂಡ ಗುಜರಾತ್ ನ್ಯಾಯಾಲಯದ ತೀರ್ಪಿನಲ್ಲಿ ನ್ಯಾಯಾಧೀಶರು ಅವರ ಪಾಸ್​ಪೋರ್ಟ್​ ಹಿಂತಿರುಗಿಸಲು ಆದೇಶಿಸಿದ್ದಾರೆ ಮತ್ತು ಮಾರ್ಚ್​ 1 ಮತ್ತು ಮೇ 30ರ ನಡುವೆ ಯುಎಸ್​ಗೆ ಪ್ರಯಾಣಿಸಲು ಅನುಮತಿ ನೀಡಿದ್ದಾರೆ ಎಂಬುದರ ದಾಖಲೆಯನ್ನು ಪಟೇಲ್ ಈ ಸಮಯದಲ್ಲಿ ತೋರಿಸಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button