ರಾಷ್ಟ್ರೀಯಸುದ್ದಿ

‘ಆಮ್ ಆದ್ಮಿ’ಯಾಗಲು ಸಿದ್ಧರಾದ ಅಶೋಕ್ ತನ್ವರ್

ನವದೆಹಲಿ: ಲೋಕಸಭೆಯ ಮಾಜಿ ಸಂಸದ ಅಶೋಕ್ ತನ್ವರ್ ಸೋಮವಾರ ದೆಹಲಿಯಲ್ಲಿ ಆಮ್ ಆದ್ಮಿಪಕ್ಷ ಸೇರಲು ಸಿದ್ದರಾಗಿದ್ದಾರೆ. ತನ್ವರ್ ನವೆಂಬರ್ 2021ರಲ್ಲಿ ತೃಣಮೂಲ ಕಾಂಗ್ರೆಸ್​ಗೆ ಸೇರಿದ್ದರು.

ಪಂಜಾಬ್​ನಲ್ಲಿ ಇತ್ತೀಚೆಗೆ ನಡೆದ ಅಸೆಂಬ್ಲಿ ಚುನಾವಣೆಯಲ್ಲಿ ಎಎಪಿ ಮುನ್ನಡೆ ಸಾಧಿಸಿದ ಹಿನ್ನೆಲೆಯಲ್ಲಿ ತನ್ವರ್ ಈ ಹೆಜ್ಜೆಯಿರಿಸಿದ್ದಾರೆ. ತನ್ವರ್, ಪ್ರಾಸಂಗಿಕವಾಗಿ ಫೆಬ್ರವರಿ 2021ರಲ್ಲಿ ತಮ್ಮದೇ ಆದ ಪಕ್ಷ ಅಪ್ನಾ ಭಾರತ್ ಮೋರ್ಚಾ ಪ್ರಾರಂಭಿಸಿದ್ದರು. ಅವರು ಮಾಜಿ ಕಾಂಗ್ರೆಸ್ ಮುಖ್ಯಸ್ಥ ರಾಹುಲ್ ಗಾಂಧಿಯವರ ಆಪ್ತ ಸಹಾಯಕರಾಗಿದ್ದರು. ಭಾರತೀಯ ಯುವ ಕಾಂಗ್ರೆಸ್ ಉಸ್ತುವಾರಿ ತನ್ವರ್ ಅವರು INYC ಯ ಮುಖ್ಯಸ್ಥರಾಗಿದ್ದರು.

ಆದರೂ ಹರಿಯಾಣದ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ಅವರೊಂದಿಗಿನ ಸುದೀರ್ಘ ತಿಕ್ಕಾಟದ ನಂತರ ತನ್ವರ್ ಅಕ್ಟೋಬರ್ 2019ರಲ್ಲಿ ರಾಜ್ಯ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿಯೇ ಕಾಂಗ್ರೆಸನ್ನು ತೊರೆದಿದ್ದರು. ಇದಕ್ಕೆ ಕಾರಣ ಕಾಂಗ್ರೆಸ್ ತನ್ನ ಮೂಲ ಸಿದ್ದಾಂತದಿಂದ ದೂರ ಸರಿದಿದೆ ಎಂದು ಆರೋಪಿಸಿದ್ದರು.

Spread the love

Related Articles

Leave a Reply

Your email address will not be published. Required fields are marked *

Back to top button