
ತಿರುಮಲ (ಆಂಧ್ರಪ್ರದೇಶ): ತಿರುಮಲದ ಅರಣ್ಯ ಪ್ರದೇಶದಲ್ಲಿ ಮಂಗಳವಾರ ಭಾರಿ ಬೆಂಕಿ ಕಾಣಿಸಿಕೊಂಡಿದೆ ಎಂದು ಅರಣ್ಯ ರೇಂಜ್ ಅಧಿಕಾರಿ ತಿಳಿಸಿದ್ದಾರೆ. ಆದಾಗ್ಯೂ ಅದನ್ನು ನಿಯಂತ್ರಣ ಮಾಡಲಾಯಿತು ಮತ್ತು ಬೆಂಕಿಯನ್ನು ನಂದಿಸಲಾಯಿತು ಎನ್ನಲಾಗಿದೆ.
ಮಂಗಳವಾರ ಮಧ್ಯಾಹ್ನ 2.30ರ ಸುಮಾರಿಗೆ ತಿರುಮಲ ಅರಣ್ಯ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡಿತು. ಮೊದಲ ಘಾಟ್ ರಸ್ತೆಯ ಆನೆ ಕಮಾನು ಬಳಿಯ ಅರಣ್ಯ ಪ್ರದೇಶದಲ್ಲಿ ಬೆಂಕಿ ವೇಗವಾಗಿ ಹರಡಿತು. ತಿರುಮಲ ತಿರುಪತಿ ದೇವಸ್ತಾನಮ್ (TTD) ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದರು. ಬೆಂಕಿ ನಂದಿಸಲು ಸುಮಾರು 8 ಗಂಟೆ ಬೇಕಾಯಿತು ಎಂದು ತಿರುಮಲ ಅರಣ್ಯ ವಲಯದ ಅಧಿಕಾರಿ ಪ್ರಭಾಕರ ರೆಡ್ಡಿ ತಿಳಿಸಿದ್ದಾರೆ.
ಇದು ರಸ್ತೆ ಕಾಣುವಂತೆ ಮಾಡಲು ಕಳ್ಳಸಾಗಣಿಕೆದಾರರ ಕೆಲಸವಾಗಿರಬಹುದು ಎಂದು ರೆಡ್ಡಿ ಹೇಳಿದ್ದಾರೆ. ಅವರು ಒಂದೆರಡು ಕಡೆ ಬೆಂಕಿಯನ್ನು ಹಚ್ಚಲು ಬಟ್ಟೆಗಳನ್ನು ಬಳಸಿದ್ದಾರೆ. ಹೀಗೆ ಕಳ್ಳರು ಹಚ್ಚಿದ್ದ ಬೆಂಕಿಯನ್ನು ಆರಿಸಲು 50 ಜನರ ತಂಡವು ಮಧ್ಯಾಹ್ನ 2 ಗಂಟೆಯಿಂದ ಸತತವಾಗಿ ಕಾರ್ಯಾಚರಣೆ ನಡೆಸಿತು. ಬೆಂಕಿಯು ತಿರುಮಲ ದೇವಸ್ಥಾನದಿಂದ ಒಂದು ಕಿಲೋಮಿಟರ್ ದೂರದಲ್ಲಿರುವಂತೆಯೇ ಆರಿಸಲಾಯಿತು.




