ವಿದೇಶಸುದ್ದಿ

ಪಾಕ್​ನಿಂದ ಪರೀಕ್ಷಾರ್ಥ ಬ್ಯಾಲಿಸ್ಟಿಕ್ ಕ್ಷಿಪಣಿ ಹಾರಾಟ

ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ರಾಜಕೀಯ ಗೊಂದಲವುಂಟಾಗಿ, ಸರ್ಕಾರವೇ ಬಿದ್ದುಹೋಗಿದ್ದರೂ, ಅಲ್ಲಿನ ಸೇನೆಯು ಮಾತ್ರ ಶನಿವಾರದಂದು ಮೇಲ್ಮೈಯಿಂದ ಮಧ್ಯಮ ಶ್ರೇಣಿಯ ಬ್ಯಾಲಿಸ್ಟಿಕ್ ಶಾಹಿನ್ 3ನ ಯಾಶಸ್ವಿ ಹಾರಾಟ ಪರೀಕ್ಷೆಯನ್ನು ನಡೆಸಿತು. ಇದು 2750 ಕಿಲೋಮೀಟರ್​ಗಳವರೆಗಿನ ಗುರಿಗಳನ್ನು ಹೊಡೆಯಬಲ್ಲದು ಮತ್ತು ಇದು ತನ್ನ ವ್ಯಾಪ್ತಿಯಲ್ಲಿ ಹಲವಾರು ಭಾರತೀಯ ನಗರಗಳನ್ನು ತರುತ್ತದೆ ಎಂದು ಹೇಳಲಾಗಿದೆ.

ಪರೀಕ್ಷಾ ಹಾರಾಟವು ಶಸ್ತ್ರಾಸ್ತ್ರ ವ್ಯವಸ್ಥೆಯ ವಿವಿಧ ವಿನ್ಯಾಸ ಮತ್ತು ತಾಂತ್ರಿಕ ನಿಯತಾಂಕಗಳನ್ನು ಮರುಪರಿಶೀಳಿಸುವ ಗುರಿಯನ್ನು ಹೊಂದಿದೆ ಎಂದು ಮಿಲಿಟರಿ ಮಾಧ್ಯಮ ವಿಭಾಗ ಇಂಟರ್ ಸರ್ವಿಸಸ್ ಪಬ್ಲಿಕ್ ರಿಲೇಶನ್ಸ್ ಹೇಳಿಕೆಯಲ್ಲಿ ತಿಳಿಸಿದೆ.

ಶಾಹೀನ್ 3 ಮೇಲ್ಮೈಯಿಂದ ಮೇಲ್ಮೈಗೆ ಉಡಾವಣೆಗೊಳಿಸುವಂಥ ಬ್ಯಾಲಿಸ್ಟಿಕ್ ಕ್ಷಿಪಣಿಯಾಗಿದ್ದು, ಇದು 2750 ಕಿಲೋಮಿಟರ್ ವ್ಯಾಪ್ತಿಯನ್ನು ಹೊಂದಿದೆ. ಇದು ಭಾರತದ ಈಶಾನ್ಯ ಮತ್ತು ಅಂಡಮಾನ್ ನಿಕೋಬಾರ್ ದ್ವೀಪಗಳ ಅತ್ಯಂತ ದೂರದ ಬಿಂದುವನ್ನು ತಲುಪುವ ಸಾಮರ್ಥ್ಯವನ್ನು ಹೊಂದಿದೆ ಎಂದು ಡಾನ್ ಪತ್ರಿಕೆ ವರದಿ ಮಾಡಿದೆ.

Related Articles

Leave a Reply

Your email address will not be published. Required fields are marked *

Back to top button