Latestಮನರಂಜನೆಸಿನಿಮಾಸೆಲೆಬ್ರಿಟಿ

ತಾಯಿಯಾದ ನಟಿ ಪ್ರಿಯಾಂಕ ಚೋಪ್ರಾ: ಮನೆಗೆ ಆಗಮಿಸಿದ ಮಹಾಲಕ್ಷ್ಮೀ

ನಟಿ ಪ್ರಿಯಾಂಕ ಚೋಪ್ರಾ ಇದ್ದಕ್ಕಿದ್ದ ಹಾಗೆ ಅಭಿಮಾನಿಗಳೀಗೆ ಸಪ್ರೈಸ್ ನೀಡಿದ್ದಾರೆ. ಮೊದಲ ಮಗುವನ್ನ ಭರಮಾಡಿಕೊಂಡಿರೋ ಪ್ರಿಯಾಂಕ ಚೋಪ್ರಾ ಹಾಗೂ ನಿಕ್ ಜೋನಸ್ ಖುಷಿಯ ಸುದ್ದಿಯನ್ನ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಪ್ರಿಯಾಂಕ ಕೊಟ್ಟಿರೋ ಸಪ್ರೈಸ್ ಸುದ್ದಿ ಕೇಳಿ ಅಭಿಮಾನಿಗಳು ಖುಷಿಯ ಜೊತೆಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ.

2018 ರಲ್ಲಿ ಹಸೆಮಣೆ ಏರಿದ ಪ್ರಿಯಾಂಕ ಚೋಪ್ರಾ ಹಾಗೂ ನಿಕ್ ಜೋನಸ್ ನಾಲ್ಕು ವರ್ಷಗಳ ಬಳಿಕ ಮನೆಗೆ ಹೊಸ ಸದಸ್ಯಳನ್ನ ಭರಮಾಡಿಕೊಂಡಿದ್ದಾರೆ. ಅಂದ್ಹಾಗೆ ಪ್ರಿಯಾಂಕ ಹಾಗೂ ನಿಕ್ ಜೋನಸ್ ಬಾಡಿಗೆ ತಾಯಿಯ ಮೂಲಕ ಪೋಷಕರಾಗಿದ್ದಾರೆ. ಈ ಜೋಡಿಗಳ ಮಧ್ಯೆ ಹತ್ತು ವರ್ಷ ವಯಸ್ಸಿನ ಅಂತರವಿದ್ದು ಪ್ರಿಯಾಂಕ ನಿಕ್ ಗಿಂತ ಹತ್ತು ವರ್ಷ ದೊಡ್ಡವರು.

ವಯಸ್ಸಿನ ಅಂತರದಿಂದಲೇ ಈ ಜೋಡಿಗಳು ಸಾಕಷ್ಟು ಟೀಕೆಗೆ ಗುರಿಯಾಗಿದ್ದರು. ಆದರೆ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಚೋಪ್ರಾ ಹಾಗೂ ಜೋನಸ್ 2018ರಲ್ಲಿ ಕುಟುಂಬ ಸದಸ್ಯರು ಹಾಗೂ ಕೆಲ ಆಪ್ತರ ಸಮುಖದಲ್ಲಿ ಅದ್ದೂರಿಯಾಗಿ ವಿವಾಹವಾಗಿದ್ದರು. ಇದೀಗ ಮನೆಗೆ ಹೊಸ ಮಗವಿನ ಆಗಮನ ಈ ಜೋಡಿಗಳ ಬಾಳಲ್ಲಿ ಮತ್ತಷ್ಟು ಖುಷಿ ಮೂಡಿಸಿದೆ.

ಪ್ರಿಯಾಂಕ ಹಾಗೂ ಜೋನಸ್ ಮದುವೆಯ ಬಳಿಕ ಅಮೆರಿಕಾದಲ್ಲಿ ನೆಲೆಸಿದ್ದಾರೆ. ಬಾಲಿವುಡ್ ಸಿನಿಮಾಗಳಿಗಿಂತ ಹೆಚ್ಚಾಗಿ ಹಾಲಿವುಡ್ ಪ್ರಾಜೆಕ್ಟ್ ಗಳಲ್ಲಿ ಬ್ಯುಸಿಯಾಗಿರೋ ಪ್ರಿಯಾಂಕಗೆ ಪತಿ ನಿಕ್ ಬೆಂಬಕವಾಗಿ ನಿಂತಿದ್ದಾರೆ.

ಮೂಲಗಳ ಪ್ರಕಾರ ಪ್ರಿಯಾಂಕ ಹಾಗೂ ನಿಕ್ ಹೆಣ್ಣು ಮಗುವನ್ನ ಪಡೆದಿದ್ದಾರೆ. ಆದರೆ ಈ ಸ್ಟಾರ್ ದಂಪತಿಗಳು ಮಾತ್ರ ಇದ್ರ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ಪ್ರಿಯಾಂಕ್ ಹಾಗೂ ನಿಕ್ ಪೋಷಕರಾಗಿರೋದಕ್ಕೆ ಬಾಲಿವುಡ್ ಸೆಲೆಬ್ರಿಟಿಗಳಾದ ಆತಿಯಾ ಶೆಟ್ಟಿ, ವಿಕ್ಕಿ ಕೌಶಲ್, ಅರ್ಜುನ್ ಕಪೂರ್, ಪೂಜಾ ಹೆಗ್ಡೆ ಸೇರಿದಂತೆ ಸಾಕಷ್ಟು ಮಂದಿ ಶುಭ ಹಾರೈಸಿದ್ದಾರೆ, ಜೊತೆಗೆ ಹಾಲಿವುಡ್ ಸೆಲೆಬ್ರಿಟಿಗಳು ಶುಭಶಯ ಕೋರಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button