Breaking NewsLatestರಾಜ್ಯಸುದ್ದಿ
ಬೆಳ್ಳಂಬೆಳಗ್ಗೆ ಭೀಕರ ಅಪಘಾತ; ಸ್ಥಳದಲ್ಲೇ ಐವರು ಸಾವು

ವಿಜಯನಗರ: ಕ್ರೂಸರ್ ದ ಆಕ್ಸಲ್ ಕಟ್ ಆಗಿ ಅಪಘಾತದಲ್ಲಿ ಸಂಭವಿಸಿ ಐವರು ಸಾವನ್ನಪ್ಪಿರುವ ಘಟನೆ ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಬಣವಿಕಲ್ಲು ಗ್ರಾಮದ ರಾ.ಹೆ. 50 ರಬಳಿ ನಡೆದಿದೆ.
ಸಿದ್ದಯ್ಯ ಕಾಳಗಿ (42) , ಕಲ್ಲವ್ವ (60), ಕುಂತವ್ವ ಮಸಳಿ (50), ನಿಲ್ಲಮ್ಮ (54) ಹಾಗೂ ಲಕ್ಷ್ಮೀಬಾಯಿ (60) ಮೃತ ದುರ್ದೈವಿಗಳು. ಮೃತವರು ನಿಡಗುಂದಿ ಗ್ರಾಮದ ಸುತ್ತಮುತ್ತಲಿನ ಜನರು ಎಂಬ ಮಾಹಿತಿ ಲಭ್ಯವಾಗಿದೆ.
ರಾಮೇಶ್ವರ ಕಡೆಗೆ ಹೋಗುತ್ತಿದ್ದಾಗ ದುರ್ಘಟನೆ ಸಂಭವಿಸಿದೆ. ಪರಿಣಾಮ ಸ್ಥಳದಲ್ಲೇ ಐವರು ಸಾವನ್ನಪ್ಪಿ, 9 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಗಾಯಾಳು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಸಂಬಂಧ ಕಾನಾಹೊಸಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
