Breaking NewsLatestರಾಷ್ಟ್ರೀಯಸುದ್ದಿ
ಅಮೆರಿಕದಲ್ಲಿ ಒಂದೇ ದಿನ 10 ಲಕ್ಷಕ್ಕಿಂತಲೂ ಹೆಚ್ಚು ಕೊರೊನಾ ಪ್ರಕರಣ ಪತ್ತೆ…!
ವಾಷಿಂಗ್ಟನ್ : ಒಮಿಕ್ರಾನ್ ರೂಪಾಂತರದ ವೈರರ್ ಹರಡುವಿಕೆಯ ಮಧ್ಯೆ ಅಮೆರಿಕದಲ್ಲಿ ಸೋಮವಾರ 10 ಲಕ್ಷ ಕೋವಿಡ್-19 ಪ್ರಕರಣಗಳನ್ನು ವರದಿ ಮಾಡಿದೆ.
ಅಮೆರಿಕ ಆರೋಗ್ಯ ಅಧಿಕಾರಿಗಳು ಕೊರೊನಾ ವೈರಸ್ನ ಹಿಂದಿನ ಹಿಂದಿನ ಯಾವುದೇ ಅಲೆಗಿಂತ ಮೂರು ಪಟ್ಟು ಹೆಚ್ಚು ಹೊಸ ಪ್ರಕರಣಗಳನ್ನು ದಾಖಲಿಸಿದ್ದಾರೆ, ಸೋಮವಾರ ಒಂದೇ ದಿನ 10 ಲಕ್ಷಕ್ಕಿಂತಲೂ ಹೆಚ್ಚು ಪ್ರಕರಣಗಳು ವರದಿಯಾಗಿವೆ.
ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ಡೇಟಾವು ಹಿಂದಿನ ದಿನಕ್ಕಿಂತ ಸುಮಾರು 10 ಲಕ್ಷದ 42 ಸಾವಿರ ಹೆಚ್ಚಿನ ಪ್ರಕರಣಗಳನ್ನು ತೋರಿಸಿದೆ ಮತ್ತು ಎಲ್ಲಾ ರಾಜ್ಯಗಳು ವರದಿ ಮಾಡಿದೆ ಎಂಬುದು ತಕ್ಷಣವೇ ಸ್ಪಷ್ಟವಾಗಿಲ್ಲ. ಆ ಎಣಿಕೆಯು ಭಾರೀ ಸಂಖ್ಯೆಯ ಬ್ಯಾಕ್‌ಲಾಗ್ ಪ್ರಕರಣಗಳನ್ನು ಒಳಗೊಂಡಿದೆ ಎಂದೂ ಹೇಳಲಾಗುತ್ತಿದೆ.
ಹಿಂದಿನ ಏಕದಿನ ದಾಖಲೆಯು ಸುಮಾರು 5 ಲಕ್ಷದ 91 ಸಾವಿರ ಪ್ರಕರಣಗಳಾಗಿದ್ದು, ಇದು ಕಳೆದ ಗುರುವಾರ ದಾಖಲಾಗಿದೆ.
