Breaking NewsLatestವಿದೇಶಸುದ್ದಿಸೆಲೆಬ್ರಿಟಿ

ಜಗದೇಕ ಸುಂದರಿಗೆ ವೀಸಾ ನಿರಾಕರಿಸಿದ ಅಮೇರಿಕಾ !

ಲಂಡನ್: ಜಗತ್ತಿನ ಸುಂದರಿಗೆ ಅಮೇರಿಕಾ ವೀಸಾ ನಿರಾಕರಿಸಿದೆ. 2020 ರಲ್ಲಿ ಇಂಗ್ಲೆಂಡ್ ಭುವನ ಸುಂದರಿ ಕಿರೀಟ ತೊಟ್ಟಿದ್ದ ಲೀನ್ ಕ್ಲೈವ್ ಅವರಿಗೆ ಅಮೆರಿಕ ಪ್ರವೇಶ ಮಾಡದಂತೆ ವೀಸಾ ನಿರಾಕರಿಸಲಾಗಿದೆ. ಇದೇ 9ರಿಂದ ಅಮೆರಿಕದಲ್ಲಿ ನಡೆಯಲಿರುವ ಜಾಗತಿಕ ಸುಂದರಿಯರ ಸ್ಪರ್ಧೆಯಲ್ಲಿ ಭಾಗವಹಿಸಲು ಲೀನ್ ತಯಾರಿ ಮಾಡಿಕೊಂಡಿರುವಾಗಲೇ ಲಂಡನ್ನಿನಲ್ಲಿರುವ ಅಮೆರಿಕಾ ದೂತಾವಾಸ ಕಚೇರಿ ವೀಸಾ ನಿರಾಕರಣೆ ಮಾಡಿದೆ.

ಲೀನ್ ಕ್ಲೈವ್ ವಿಶ್ವ ಸುಂದರಿ ಸ್ಪರ್ಧಿ

ವೀಸಾ ರಿಯಾಯಿತಿ ಕಾರ್ಯಕ್ರಮದ ಅಂಗವಾಗಿ ಅವರ ಪತಿ ಮತ್ತು 6 ತಿಂಗಳ ಮಗುವಿಗೆ ವೀಸಾ ನೀಡಿದೆ.
ಲೀನ್, ಸಿರಿಯಾ ಮೂಲದ ಹಿನ್ನೆಲೆ ಹೊಂದಿರುವುದೇ ಅಮೆರಿಕ ಸರ್ಕಾರ ಅವರಿಗೆ ವೀಸಾ ನಿರಾಕರಣೆ ಮಾಡಿರುವುದಕ್ಕೆ ಪ್ರಮುಖ ಕಾರಣ ಎಂದು ಹೇಳಲಾಗುತ್ತಿದೆ.
ನಾನು ಒಂದು ವರ್ಷದಿಂದಲೂ ಇದಕ್ಕಾಗಿ ಎಲ್ಲ ತಯಾರಿ ಮಾಡಿಕೊಂಡಿದ್ದೇನೆ ಜಗತ್ತಿನ 60ರ ದೇಶಗಳ ಸಾವಿರಾರು ಸ್ಪರ್ಧಿಗಳಿಗೆ ಭಾಗವಹಿಸಲು ಅವಕಾಶ ಮಾಡಿಕೊಟ್ಟಿರುವ ಅಮೆರಿಕ ಸರ್ಕಾರ ನನಗೊಬ್ಬಳಿಗೆ ಏಕೆ ವೀಸಾ ನಿರಾಕರಿಸಲಾಗಿದೆ ಎಂಬುದೇ ಅರ್ಥವಾಗುತ್ತಿಲ್ಲ ಎಂದು ಲೀನ್ ಅಲವತ್ತುಕೊಂಡಿದ್ದಾರೆ

Spread the love

Related Articles

Leave a Reply

Your email address will not be published. Required fields are marked *

Back to top button