
ನವದೆಹಲಿ: ಭಾರತದಲ್ಲಿ ಟಿವಿ ಸೆಟ್ಗಳ ಬೆಲೆ ಶೀಘ್ರದಲ್ಲೇ ಏರಿಕೆಯಾಗುವ ಸಾಧ್ಯತೆ ಇದೆ. ಚಾಲ್ತಿಯಲ್ಲಿರುವ ವೆಚ್ಚ ಮತ್ತು ಪೂರೈಕೆ ನಿರ್ಬಂಧಗಳನ್ನು ಪೂರೈಸಲು ಸಾಧನಗಳ ಬೆಲೆಗಳನ್ನು ಹೆಚ್ಚಿಸಲು ಟಿವಿ ತಯಾರಕ ಕಂಪನಿಗಳು ಸಿದ್ಧತೆ ನಡೆಸಿವೆ.
ಉಕ್ರೇನ್-ರಷ್ಯಾ ಬಿಕ್ಕಟ್ಟಿನ ಜೊತೆಗೆ, ಚೀನಾದಲ್ಲಿ ಕೋವಿಡ್ 19 ಲಾಕ್ಡೌನ್ಗಳಿಂದಾಗಿ ಕಂಪನಿಗಳು ತಮ್ಮ ಸಾಮಾಗ್ರಿಗಳ ಪೂರೈಕೆಯಲ್ಲಿ ಅಡೆತಡೆಗಳನ್ನು ಎದುರಿಸುತ್ತಿವೆ.
ಹೆಚ್ಚುತ್ತಿರುವ ಇಂಧನ ಬೆಲೆಗಳಿಂದಾಗಿ ತಯಾರಕರು ತಮ್ಮ ಸಾಗಣೆಗೆ ಹೆಚ್ಚಿನ ಹಣವನ್ನು ಪಾವತಿಸಲು ಪ್ರಾರಂಭಿಸಿದ್ದಾರೆ.
ವಿವಿಧ ಕಚ್ಚಾ ಸಾಮಾಗ್ರಿಗಳು, ಸೇವೆಗಳು ಮತ್ತು ಅಂತಿಮ ಉತ್ಪನ್ನಗಳ ಬೆಲೆಗಳು ಕನಿಷ್ಠ 5-10 ಪ್ರತಿಶತದಷ್ಟು ಏರಿಕೆಯನ್ನು ಕಾಣುತ್ತವೆ” ಎಂದು ಸೂಪರ್ ಪ್ಲಾಸ್ಟ್ರೋನಿಕ್ಸ್ (SPPL) CEO ಅವನೀತ್ ಸಿಂಗ್ ಮರ್ವಾ ಉಲ್ಲೇಖಸಿ ಗ್ಯಾಜೆಟ್ 360 ವರದಿ ಮಾಡಿದೆ.
ಚೀನಾದಲ್ಲಿನ ಲಾಕ್ಡೌನ್ನಿಂದಾಗಿ ಹಡಗುಗಳು ಇದ್ದಕ್ಕಿದ್ದಂತೆ ಸ್ಥಗಿತಗೊಳ್ಳಲು ಕಾರಣವಾಗಿವೆ ಮತ್ತು ಅವೆಲ್ಲವೂ 100 ಪ್ರತಿಶತ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತಿಲ್ಲ, ಇದು ಸಾಗಣೆಯಲ್ಲಿ ಹೆಚ್ಚಿನ ವಿಳಂಬಕ್ಕೆ ಕಾರಣವಾಗುತ್ತದೆ ಎಂದು ಅವನೀತ್ ಹೇಳಿದ್ದಾರೆ. ಅಲ್ಲದೇ ಇದರಿಂದ ಗ್ರಾಹಕರಿಗೆ ಖಂಡಿತಾ ತೊಂದರೆಯಾಗಲಿದೆ ಎಂದು ಎಚ್ಚರಿಸಿದ್ದಾರೆ. ಬೆಲೆ ಏರಿಕೆಯ ನಿಖರವಾದ ಶೇಕಡಾವಾರು ಪ್ರಮಾಣವನ್ನು ಇನ್ನೂ ಅಂದಾಜಿಸಬೇಕಾಗಿದೆ. ಆದರೆ, ಈ ತಿಂಗಳಿನಿಂದಲೇ ಬೆಲೆ ಏರಿಕೆ ಜಾರಿಗೆ ಬರಬಹುದು ಎಂದು ಮರ್ವಾ ಸೂಚಿಸಿದ್ದಾರೆ.



