Latestಜಿಲ್ಲಾ ಸುದ್ದಿಹುಬ್ಬಳ್ಳಿ - ಧಾರವಾಡ

ಧಾರವಾಡ ಪೊಲೀಸರಿಂದ ಇಬ್ಬರು ಸರಗಳ್ಳರು ಬಂಧನ: 140 ಗ್ರಾಂ ಚಿನ್ನ, 2 ಬೈಕ್ ವಶ

ಧಾರವಾಡ: ಇತ್ತೀಚೆಗೆ ಧಾರವಾಡದ ಶ್ರೀನಗರ ಹಾಗೂ ಸೈದಾಪುರಗಳಲ್ಲಿ ಸರಗಳ್ಳತನ ಮಾಡಿ ಪರಾರಿಯಾಗಿದ್ದ, ಇಬ್ಬರು ಖದೀಮರನ್ನು ಪತ್ತೆ ಮಾಡುವಲ್ಲಿ ಧಾರವಾಡ ಉಪನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಆಂಧ್ರಪ್ರದೇಶ ಮೂಲದ ಸಾಹಿಲ್ ಅಲಿಯಾಸ್ ಹುಜ್ಜುಅಲಿ ಜಾಫರಿ ಹಾಗೂ ಇನ್ನೋರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಪೊಲೀಸರು ಬಂಧಿಸಿದ್ದಾರೆ.

ವಾಯುವಿಹಾರಕ್ಕೆಂದು ಹೋಗುತ್ತಿದ್ದ ಮಹಿಳೆಯರನ್ನು ಗುರಿಯಾಗಿಸಿಕೊಂಡು ಅವರ ಕೊರಳಲ್ಲಿದ್ದ ಚಿನ್ನದ ಆಭರಣವನ್ನು ಇವರು ದೋಚುತ್ತಿದ್ದರು. ಇದಲ್ಲದೇ ಬೈಕ್‌ಗಳನ್ನೂ ಕೂಡಾ ಕಳ್ಳತನ ಮಾಡುತ್ತಿರುವುದು ಬಂಧನದ ನಂತರ ತಿಳಿದು ಬಂದಿದೆ.

ಬಂಧಿತ ಈ ವ್ಯಕ್ತಿಗಳಿಂದ 4,52,500 ಮೌಲ್ಯದ 140 ಗ್ರಾಂ ಚಿನ್ನಾಭರಣ ಹಾಗೂ 1,42,000 ಮೌಲ್ಯದ ಎರಡು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಾಗಿದೆ. ಧಾರವಾಡದ ವಿವಿಧೆಡೆಗಳಲ್ಲಿ ನಡೆದಿದ್ದ ನಾಲ್ಕು ಸರಗಳ್ಳತನದಲ್ಲಿ ಇವರು ಭಾಗಿಯಾಗಿದ್ದು ಎಂದು ಹೇಳಲಾಗಿದೆ. ಸದ್ಯ ಈಗ ಉಪನಗರ ಠಾಣೆಯ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button