
ದಾವಣಗೆರೆ: ಹಿಜಾಬ್ – ಕೇಸರಿ ಶಾಲು ಎರಡು ಸದ್ಯ ಕಾನೂನು ಬಾಹಿರ. ಎಲ್ಲರೂ ಸಮವಸ್ತ್ರದಲ್ಲಿ ಬರಬೇಕು ಎಂದು ದಾವಣಗೆರೆ ಸಂಸದ ಜಿ.ಎಂ.ಸಿದ್ದೇಶ್ವರ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಜಾಬ್ ಹಾಗೂ ಕೇಸರಿ ಸಂಘರ್ಷ ಸಂಬಂಧ ಈಗಾಗಲೇ ಕೋರ್ಟ್ ಮಧ್ಯಂತರ ಆದೇಶದಲ್ಲಿ ಸ್ಪಷ್ಟವಾಗಿ ಹೇಳಿದೆ. ಎಲ್ಲರೂ ಈ ಪ್ರಕಾರ ನಡೆದುಕೊಳ್ಳಲಿ. ಈ ವಿಚಾರದಲ್ಲಿ ಗೊಂದಲ ಬೇಡ ಎಂದು ತಿಳಿಸಿದರು.
ಸಿಎಂ ಬಸವರಾಜ್ ಬೊಮ್ಮಾಯಿ ಅವರು ಈ ವಿಚಾರವಾಗಿ ಯಾವುದೇ ಹೇಳಿಕೆ ನೀಡದಂತೆ ಸೂಚನೆ ನೀಡಿದ್ದಾರೆ. ಹಾಗಾಗಿ ಹೆಚ್ಚು ಮಾತನಾಡಲಾರೆ ಎಂದು ಹೇಳಿದರು.
ಸಿಎಂ ಇಬ್ರಾಹಿಂಗೆ ಕೇಳಿ ಹೇಳುವೆ ಅವರು ಹರಹರ ಮಹಾದೇವ ಎನ್ನುತ್ತಾರೆ. ಹಿಜಾಬ್ -ಕೇಸರಿ ಗದ್ದಲದಲ್ಲಿ ಮಂಡ್ಯದಲ್ಲಿ ವಿದ್ಯಾರ್ಥಿನಿ ಅಲ್ಲಾವು ಅಕ್ಬರ್ ಎಂದು ಕೂಗಿದ್ದಾಳೆ. ಕೆಲವರು ಐದು ಲಕ್ಷ ರೂಪಾಯಿ ಬಹುಮಾನ ಘೋಷಣೆ ಮಾಡಿದ್ದಾರೆ.ಈ ಬಗ್ಗೆ ವಿಧಾನ ಪರಿಷತ್ ಸದಸ್ಯ ಸಿಎಂ ಇಬ್ರಾಹಿಂಗೆ ಕೇಳುವೆ. ನೀವು ಹರಹರ ಮಹಾದೇವ ಎನ್ನುವಿರಿ ಎಂದು ಸಿದ್ದೇಶ್ವರ್ ವ್ಯಂಗ್ಯವಾಡಿದರು.



