Breaking NewsLatestರಾಷ್ಟ್ರೀಯ
ಟ್ವಿಟರ್ ಕೇಸ್: ಯುಪಿ ಪೊಲೀಸರಿಗೆ ಕರ್ನಾಟಕ ಹೈಕೋರ್ಟ್ ಚಾಟಿ; ಖುದ್ದು ಹಾಜರಾತಿಯಿಂದ ಮನಿಷ್ಗೆ ವಿನಾಯ್ತಿ

ಬೆಂಗಳೂರು: ಗಾಜಿಯಾಬಾದ್ನಲ್ಲಿ ಮುಸ್ಲಿಂ ವ್ಯಕ್ತಿಯ ಮೇಲಿನ ಹಲ್ಲೆ ಕುರಿತ ಟ್ವಿಟರ್ ಪೋಸ್ಟ್ ಸಂಬಂಧ ಟ್ವಿಟರ್ ಇಂಡಿಯಾ ಮುಖ್ಯಸ್ಥ ಮನಿಷ್ ಮಹೇಶ್ವರಿಗೆ ಉತ್ತರ ಪ್ರದೇಶ ಪೊಲೀಸರು ನೀಡಿರುವ ನೊಟೀಸ್ ದುರುದ್ದೇಶಪೂರಿತ ಎಂದು ಕರ್ನಾಟಕ ಹೈಕೋರ್ಟ್ ಹೇಳಿದೆ.
ಈ ಪ್ರಕರಣದಲ್ಲಿ ವಿಚಾರಣೆಗಾಗಿ ಯುಪಿಗೆ ಪ್ರಯಾಣಿಸಬೇಕಿಲ್ಲ ಎಂದು ಹೈಕೋರ್ಟ್ ಹೇಳಿರುವುದರಿಂದ ಮನಿಷ್ ಮಹೇಶ್ವರಿಗೆ ಬಿಗ್ ರಿಲೀಫ್ ಸಿಕ್ಕಂತಾಗಿದೆ.
ವಿಚಾರಣೆಗೆ ಹಾಜರಾಗಬೇಕೆಂಬ ಯುಪಿ ಪೊಲೀಸರ ನೊಟೀಸ್ ಪ್ರಶ್ನಿಸಿ ಮನಿಷ್ ಹೈಕೋರ್ಟ್ ಮೊರೆಹೋಗಿದ್ದರು. ವಿಡಿಯೋ ಕಾಲ್ ಮೂಲಕ ವಿಚಾರಣೆಯಲ್ಲಿ ಭಾಗಿಯಾಗಲು ಸಿದ್ಧ ಎಂಬ ಮನಿಷ್ ಪ್ರಸ್ತಾಪವನ್ನು ತಿರಸ್ಕರಿಸಿದ್ದ ಯುಪಿ ಪೊಲೀಸರು ಮನಿಷ್ ಖುದ್ದು ಹಾಜರಾಗಬೇಕೆಂದು ಹೇಳಿದ್ದರು.
