Breaking NewsLatestಮೆಟ್ರೋರಾಜ್ಯಸುದ್ದಿ
ಕೊರೊನಾ ಪ್ರಕರಣ ಹೆಚ್ಚಾದ್ರೆ ಕಠಿಣ ನಿಯಮ ಜಾರಿ: ಆರೋಗ್ಯ ಸಚಿವ ಸುಧಾಕರ್

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾದ್ರೆ ಮತ್ತೆ ಕಠಿಣ ನಿಯಮ ಜಾರಿ ಮಾಡಲಾಗುವುದು ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನವರು ಅವೈಜ್ಞಾನಿಕವಾಗಿ ರೂಲ್ಸ್ ಜಾರಿ ಮಾಡಿದ್ದಾರೆ ಎಂದು ಹೇಳುತ್ತಿದ್ದಾರೆ. ಸರಕಾರ ಕೂಡ ಎಲ್ಲ ಆಯಾಮಗಳಿಂದ ಚರ್ಚಿಸಿ, ತಜ್ಞರ ವರದಿಯೊಂದಿಗೆ ನಿಯಮಗಳನ್ನು ಜಾರಿಗೊಳಿಸುತ್ತಿದೆ ಎಂದು ಹೇಳಿದ್ದಾರೆ.
ಕೊರೊನಾ ಮೊದಲ ಅಲೆಯಲ್ಲಿ 100 ಕೇಸ್ ಬಂದ್ರೆ ಲಾಕ್ ಡೌನ್ ಮಾಡಿದ್ದೇವು. 2 ನೇ ಅಲೆಯಲ್ಲಿ 3 ಸಾವಿರ ಕೇಸ್ ದಾಟಿದ ಬಳಿಕ ಲಾಕ್ ಡೌನ್ ಮಾಡಲಾಗಿತ್ತು. ಕೊರೊನಾ 3 ನೇ ಅಲೆಯಲ್ಲಿ 2 ವಾರದ ಬಳಿಕ ವೀಕೆಂಡ್ ಕರ್ಪ್ಯೂ ಜಾರಿ ಮಾಡಿದ್ದೇವೆ. ಇದೆಲ್ಲ ವೈಜ್ಞಾನಿಕವಾಗಿ ಯೋಚನೆ ಮಾಡಿ ಹೊಸ ಗೈಡ್ ಲೈನ್ ಜಾರಿ ಮಾಡಿದ್ದೇವೆ ಎಂದರು.
